
ನೆಲ್ಯಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಂದಲ ಘನತ್ಯಾಜ್ಯ ಘಟಕಕ್ಕೆ ಅಗ್ನಿ ಅವಘಡ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಅಗ್ನಿ ಅವಘಡದಿಂದಾಗಿ ಘನತ್ಯಾಜ್ಯ ಘಟಕದ ಪ್ರದೇಶ ಹಾಗೂ ಗಂಗಾದರ.ರೈ ಎಂಬವರಿಗೆ ಸೇರಿದ ಸುಮಾರು 52ಕ್ಕಿಂತ ರಬ್ಬರ್ ಮರಗಳು ಅಗ್ನಿಗೆ ತುತ್ತಾಗಿದೆ.

ಅಗ್ನಿ ನಂದಿಸುವಲ್ಲಿ ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್, ಕಾರ್ಯದರ್ಶಿ ಅಂಗು, ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸಲಾಂ ಬಿಲಾಲ್, ಪಂಚಾಯಿತಿ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಸಾರ್ವಜನಿಕರು ಸಹಕರಿಸಿದರು.






