ನೆಲ್ಯಾಡಿ : ಎಂಬ್ರಾಯಿಡರಿ ತರಬೇತಿ ಸಮಾರೋಪ

ಶೇರ್ ಮಾಡಿ

ನೆಲ್ಯಾಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್(ರಿ)ಧರ್ಮಸ್ಥಳ ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಡಿಯಲ್ಲಿ ಕಡಬ ತಾಲೂಕಿನ ನೆಲ್ಯಾಡಿಯ ಸಿರಿ ಘಟಕದಲ್ಲಿ 5 ದಿನಗಳ ಎಂಬ್ರಾಯಿಡರಿ ತರಬೇತಿಯನ್ನು ಆಯೋಜಿಸಿದ್ದು ಕೌಕ್ರಡಿ ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಗೌಡರವರ ಅಧ್ಯಕ್ಷತೆಯೊಂದಿಗೆ ಸಮಾರೋಪ ಸಮಾರಂಭ ನಡೆಸಲಾಯಿತು.

ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಸೋಮನಾಥ.ಕೆ ಅವರು ಅಭ್ಯರ್ಥಿಗಳಿಗೆ ಅಭಿನಂದನ ಪತ್ರವನ್ನು ನೀಡಿ ಕೌಶಲ್ಯ ಅಭಿವೃದ್ಧಿ ತರಬೇತಿಯಿಂದ ನಿಮ್ಮ ಜೀವನಕ್ಕೆ ವೃತ್ತಿಯಾಗಬೇಕು ಎಂದು ಶುಭ ಹಾರೈಸಿದರು. ತಾಲೂಕಿನ ಯೋಜನಾಧಿಕಾರಿಗಳಾದ ಮೇದಪ್ಪ ಗೌಡರವರು ಅಭ್ಯರ್ಥಿಗಳನ್ನು ಉದ್ದೇಶಿಸಿ ನೀವು ಶಿಸ್ತು ಬದ್ಧವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಜನೆಯ ಮೂಲಕ ಇದರ ಪ್ರಯೋಜನ ಪಡೆದು ಯಶಸ್ವಿಯಾಗಿ ಎಂದು ಹಾರೈಸಿದರು.

ತರಬೇತಿ ಶಿಕ್ಷಕಿ ಸೌಮ್ಯರವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಶಿಬಿರಾರ್ಥಿಗಳಾದ ನಿವೇದಿತ ಹಾಗೂ ನವ್ಯ ಪ್ರಸಾದ್ ಅವರು ಅನಿಸಿಕೆ ಹೇಳಿದರು. ರಮ್ಯಾ ಹಾಗೂ ಭಾರತಿ ಪ್ರಾರ್ಥಿಸಿದರು. ಸೇವಾ ಪ್ರತಿನಿಧಿ ಹೇಮಾವತಿ ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ಧಾಧಿಕಾರಿ ಚೇತನ.ಜಿ. ನಿರೂಪಿಸಿದರು ಚಂದ್ರಿಕಾ ವಂದಿಸಿದರು.

  •  

Leave a Reply

error: Content is protected !!