ನಿಡ್ಲೆ ಗ್ರಾಮ ಪಂಚಾಯಿತಿನ ವಿಕಲಚೇತನರ ಗ್ರಾಮ ಸಭೆ

ಶೇರ್ ಮಾಡಿ

ಕೊಕ್ಕಡ: ನಿಡ್ಲೆ ಗ್ರಾಮ ಪಂಚಾಯಿತಿನ ವಿಕಲಚೇತನರ ಗ್ರಾಮ ಸಭೆಯು ಫೆ.24ರಂದು ನಿಡ್ಲೆ ಗ್ರಾಮ ಪಂಚಾಯಿತಿನ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ನ ಅಧ್ಯಕ್ಷರಾದ ಶ್ಯಾಮಲಾ ಅವರು ವಹಿಸಿದ್ದರು. ಸಭೆಯಲ್ಲಿ ತಾಲೂಕು ಪಂಚಾಯಿತಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಜಾನ್ ಬ್ಯಾಕ್ಟೀಸ್ಟ್ ಡಿಸೋಜಾ ಅವರು ಸರ್ಕಾರದಿಂದ ಸಿಗುವ ಹಲವು ಯೋಜನೆಗಳ ಬಗ್ಗೆ ವಿಕಲಚೇತನರಿಗೆ ಮಾಹಿತಿಯನ್ನು ನೀಡಿದರು.

ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾದ ಕುಮಾರಿ ಹೇಮಲತಾ ಅವರು ವಾರ್ಷಿಕ ವರದಿಯನ್ನು ಓದಿದರು. ಆರೋಗ್ಯದ ಬಗ್ಗೆ ಸಿಎಚ್ಒ ವಿನುತ ಮಾಹಿತಿ ನೀಡಿದರು. ಎರಡು ಜನ ವಿಕಲಚೇತನರಿಗೆ ವೈದ್ಯಕೀಯ ಸಹಾಯಧನದ ಚೆಕ್ ಅನ್ನು ನೀಡಲಾಯಿತು. ಪಂಚಾಯತಿಯಿಂದ ಸಿಗುವ 5/% ಅನುದಾನದ ಬಗ್ಗೆ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ದಿನೇಶ್.ಎಂ ಅವರು ಮಾಹಿತಿಯನ್ನು ನೀಡಿದರು.

  •  

Leave a Reply

error: Content is protected !!