ಗೋಳಿತ್ತೊಟ್ಟು-ಉಪ್ಪಾರಹಳ್ಳ ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭ, ಬದಲಿ ರಸ್ತೆಯಲ್ಲಿ ಪ್ರಯಾಣಿಸಲು ಮನವಿ

ಶೇರ್ ಮಾಡಿ

ನೇಸರ ಮಾ.04: ಮೇಲ್ದರ್ಜೆಗೇರಿದ ಜಿಲ್ಲಾ ಮುಖ್ಯರಸ್ತೆಯ ಹಿರೇಬಂಡಾಡಿ-ಉಪ್ಪಾರಪಳಿಕೆಯಲ್ಲಿನ ರಾಷ್ಟ್ರೀಯ ಹೆದ್ದಾರಿ 75 ಸಂಪರ್ಕಿಸುವ ಗೋಳಿತೊಟ್ಟುವಿ ನಿಂದ ಉಪ್ಪಾರಪಳಿಕೆ ಸೇತುವೆಯವರೆಗಿನ ರಸ್ತೆಯ ಕಾಂಕ್ರೀಟ್ ಕಾಮಗಾರಿ ಆರಂಭಗೊಂಡಿದೆ. ಮಾ.4 ರಿಂದ ಮಾ. 8ರವರೆಗೆ ಈ ರಸ್ತೆಯಲ್ಲಿ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿದೆ.

ನೆಲ್ಯಾಡಿ-ಉಪ್ಪಿನಂಗಡಿಯನ್ನು ಸಂಪರ್ಕಿಸುವ ಈ ರಸ್ತೆಗೆ ಕೊಕ್ಕಡ – ಪಟ್ರಮೆ – ಧರ್ಮಸ್ಥಳ ಭಾಗದ ಜನತೆ ಅನೇಕ ಸಮಯದಿಂದ ಕಾಯುತ್ತಿದ್ದರು. ಕಡೆಗೂ ಇದೀಗ ಕಾಮಗಾರಿ ಆರಂಭದ ಭರವಸೆ ದೊರೆತಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಡಬ ಶಾಸಕ ಎಸ್.ಅಂಗಾರರವರ ಅನುದಾನದಿಂದ 200 ಲಕ್ಷ ರೂ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದ್ದು, ಗೋಳಿತೊಟ್ಟಿನಿಂದ ಉಪ್ಪಾರ ಹಳ್ಳದವರೆಗೆ 8 ಇಂಚು ದಪ್ಪದ, 5.5 ಮೀಟರ್ ಅಗಲವನ್ನು ಒಳಗೊಂಡ 1.5 ಕಿಲೋಮೀಟರ್ ರಸ್ತೆ ಲೋಕೋಪಯೋಗಿ ಇಲಾಖೆಯ ಕಾಮಗಾರಿಯ ಮೂಲಕ ಸಂಪೂರ್ಣ ಕಾಂಕ್ರೀಟಿಕರಣಗೊಳ್ಳಲಿದೆ.

“ಅಡ್ಲ್ಯೂಸ್ ಸ್ಪೈಸಸ್” ವೀಕ್ಷಿಸಿ Subscribers ಮಾಡಿ

ಪ್ರಸ್ತುತ ನಾಲ್ಕು ದಿನಗಳ ಕಾಲ ಜಲ್ಲಿ ಹರಡುವಿಕೆ ಕಾಮಗಾರಿ ನಡೆಯಲಿದ್ದು, 1 ವಾರಗಳ ಕಾಲ ನಿರ್ಬಂಧವನ್ನು ತೆರವುಗೊಳಿಸಲಾಗುತ್ತದೆ. ನಂತರ ಮತ್ತೆ ಕಾಂಕ್ರೀಟ್ ಕಾಮಗಾರಿ ನಡೆಯಲಿರುವ ಕಾರಣ 1ತಿಂಗಳ ಕಾಲ ರಸ್ತೆಯನ್ನು ಸಂಪೂರ್ಣವಾಗಿ ವಾಹನಗಳ ಓಡಾಟದಿಂದ ನಿರ್ಬಂಧಗೊಳಿಸಲಾಗುತ್ತದೆ.
ಈ ಸಂದರ್ಭ ಇಲ್ಲಿನ ಜನತೆ ಪರ್ಯಾಯವಾಗಿ ನೆಲ್ಯಾಡಿ – ಉಪ್ಪಿನಂಗಡಿಯನ್ನು ಸಂಪರ್ಕಿಸಲು ಕೊಕ್ಕಡ- ಪುತ್ಯೆ ಅಥವಾ ಕೊಕ್ಕಡ- ಪೆರಿಯಶಾಂತಿ ಮಾರ್ಗವನ್ನು ಬಳಸುವಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ಕನಿಷ್ಕ, ಸಹಾಯಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ, ಪುತ್ತೂರು ಉಪ ವಿಭಾಗ.

Leave a Reply

error: Content is protected !!