ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಡೈಮಂಡ್ ಪೆಸ್ಟ್ ಚಾಲನೆ

ಶೇರ್ ಮಾಡಿ

ಬೆಳ್ತಂಗಡಿ : ಚಿನ್ನಾಭರಣಗಳ ಮೂಲಕ ಬೆಳ್ತಂಗಡಿಗೆ ಮೆರಗು ತಂದ ಸಂಸ್ಥೆ ಮುಳಿಯ. ವ್ಯವಹಾರದಲ್ಲಿ ಆತಿಥ್ಯವನ್ನು ಸದಾ ಗ್ರಾಹಕರಿಗೆ ನೀಡುತ್ತಿದ್ದು ಇದರಿಂದ ಸಂಸ್ಥೆ ಜನಮನಸದಲ್ಲಿ ನೆಳ್ಮೆಯ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಮುಂಡಾಜೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ.ಹೇಳಿದರು.

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಮಾ.3ರಂದು ನಡೆದ ಡೈಮಂಡ್ ಪೆಸ್ಟ್ ಚಾಲನೆ ನೀಡಿ ಮಾತನಾಡಿದರು.

ಜೆಸಿಐ ಭಾರತದ ವಲಯ 15ರ ಉಪಾಧ್ಯಕ್ಷ ರಂಜಿತ್ ಹೆಚ್.ಡಿ ಮಾತನಾಡಿ, 80 ದಶಕದಿಂದ ಜನರೊಂದಿಗೆ ಅವಿನಾಭವ ಸಂಬಂಧವನ್ನು ಉಳಿಸಿಕೊಂಡು ಬಂದಿರುವ ಸಂಸ್ಥೆ ಮುಳಿಯ. ಚಿನ್ನಾಭರಣಗಳಲ್ಲಿ ಉತ್ತಮ ಗುಣಮಟ್ಟ ಮತ್ತು ಶುದ್ದತೆಯನ್ನು ಕಾಪಾಡುತ್ತ ಬಂದಿರುವ ಮುಳಿಯ ವಿನೂತನ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.

ರ್ಮಾಕೆಟಿಂಗ್ ಕನ್ಸಲ್‌ಟೆಂಟ್ ವೇಣು ಶರ್ಮ, ಕಾರ್ಯನಿರ್ವಾಹಕ ಕಾರ್ಯದರ್ಶಿ ಶಿವಕೃಷ್ಣ ಮೂರ್ತಿ ಉಪಸ್ಥಿತರಿದ್ದರು. ಗ್ರಾಹಕರು, ಸಿಬ್ಬಂದಿ ವರ್ಗವದರು ಭಾಗವಹಿಸಿದ್ದರು. ಶಾಖಾ ಪ್ರಬಂಧಕ ಲೋಹಿತ್ ಸ್ವಾಗತಿಸಿದರು. ಅಶ್ವಥ್ ವಂದಿಸಿದರು. ಕನ್ನಿಕಾ ಕಾರ್ಯಕ್ರಮ ನಿರೂಪಿಸಿದರು.

ಈ ಹಿಂದೆ ಉದನೆ ಹಾಗೂ ಶಿರಾಡಿಯಲ್ಲಿ ಕೆ ಎಸ್ ಆರ್ ಟಿ ಸಿ ವೇಗದೂತ ಬಸ್‍ಗಳ ನಿಲುಗಡೆ ಆಗುತ್ತಿರಲಿಲ್ಲ. ಇದರಿಂದ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ವೇಗದೂತ ಬಸ್‍ಗಳಲ್ಲಿ ಬರುವ ಪ್ರಯಾಣಿಕರು ಎಂಜಿರ ಮಲ್ನಾಡು ಹೋಟೆಲ್ ಬಳಿ ಇಲ್ಲವೇ ಗುಂಡ್ಯದಲ್ಲಿ ಇಳಿದು ಬೇರೆ ವಾಹನದಲ್ಲಿ ಸಂಚಾರ ಮಾಡಬೇಕಾಗಿತ್ತು. ಈ ವಿಚಾರ ಶಿರಾಡಿ ಗ್ರಾಮಸಭೆಯಲ್ಲೂ ಪ್ರಸ್ತಾಪವಾಗಿತ್ತು. ಈ ಬಗ್ಗೆ ಗ್ರಾಮ ಪಂಚಾಯತಿನಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮನವಿ ಮಾಡಿ ಸಂಬಂಧಿಸಿದವರಿಗೆ ಸೂಕ್ತ ಆದೇಶ ನೀಡುವಂತೆ ಕೋರಲಾಗಿತ್ತು.

ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಮಂಗಳೂರು-ಬೆಂಗಳೂರು ಮಾರ್ಗವಾಗಿ ಸಂಚಾರ ಮಾಡುತ್ತಿರುವ ಎಲ್ಲಾ ವೇಗದೂತ ಸಾರಿಗೆಗಳನ್ನು ಶಿರಾಡಿ ಮತ್ತು ಉದನೆಯಲ್ಲಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಹತ್ತಿಸಿ/ಇಳಿಸಿ ಮಾರ್ಗಾಚರಣೆಗೊಳಿಸಲು ಸದ್ರಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ಸಾರಿಗೆಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಪರವಾಗಿ ಇಲಾಖೆಯ ಹಿರಿಯ ಅಧಿಕಾರಿ ಜಾನ್ ಅಂತೋನಿ ಜಾರ್ಜ್ ಅವರು ಆದೇಶಿಸಿದ್ದಾರೆ.

  •  

Leave a Reply

error: Content is protected !!