ಅರಣ್ಯ ಇಲಾಖೆ ಹಾಗೂ ಶೌರ್ಯವಿಪತ್ತು ಘಟಕದಿಂದ ವನ್ಯಜೀವಿ ಕಾಳಜಿ ಮತ್ತು ಕಾಳ್ಗಿಚ್ಚು ಜಾಗೃತಿ ಅಭಿಯಾನ

ಶೇರ್ ಮಾಡಿ

ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯವಿಪತ್ತು ನಿರ್ವಹಣಾ ಘಟಕ ಅರಸಿನಮಕ್ಕಿ ಶಿಶಿಲ ಮತ್ತು ಕರ್ನಾಟಕ ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯದ ಜಂಟಿ ಸಹಭಾಗಿತ್ವದಲ್ಲಿ ವನ್ಯಜೀವಿ ಕಾಳಜಿ ಅಭಿಯಾನ ಹಾಗೂ ಕಾಳ್ಗಿಚ್ಚು ಮುಂಜಾಗೃತಿ ಕಾರ್ಯಕ್ರಮ ಗುರುವಾರ ರಂದು ನಡೆಯಿತು.

ಉಪ್ಪಿನಂಗಡಿ ಅರಣ್ಯ ವಲಯದ ಕಾಡಂಚಿನ ಶಾಲೆಗಳಾದ ಅರಸಿನಮಕ್ಕಿ ಗೋಪಾಲಕೃಷ್ಣ ಅನುದಾನಿತ ಶಾಲೆ, ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆ, ಶಿಶಿಲ ಶಾಲೆ ಹಾಗೂ ಕೊಳಕ್ಕೆಬೈಲು ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ, ವನ್ಯಜೀವಿ ಕಾಳಜಿ, ಕಾಡ್ಗಿಚ್ಚು ತಪ್ಪಿಸಲು ಬೇಕಾದ ಮುಂಜಾಗೃತಿ ಕ್ರಮಗಳು ಹಾಗೂ ಕಾಡ್ಗಿಚ್ಚು ಕಾಣಿಸಿಕೊಂಡಾಗ ಅದನ್ನು ಹತೋಟಿಗೆ ತರಲು ಅರಣ್ಯ ಇಲಾಖೆಯ ಸಹಕಾರ ಹೇಗೆ ಪಡೆಯಬಹುದು ಎಂಬ ಬಗ್ಗೆ ವಿಪತ್ತು ನಿರ್ವಹಣಾ ಸಮಿತಿಯ ಸುರೇಶ್ ಶಿಬಾಜೆ ಮಾಹಿತಿ ನೀಡಿದರು.

ಅರಣ್ಯಾಧಿಕಾರಿ ನಾಗಲಿಂಗ ಮತ್ತು ಸಚಿನ್ ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ಉಂಟಾಗುವ ನೀರಿನ ಕೊರತೆಯನ್ನು ನೀಗಿಸಲು ನಾಗರಿಕ ಸಮಾಜದಿಂದ ಯಾವ ರೀತಿಯ ನೆರವು ನೀಡಬಹುದೆಂದು ವಿವರಿಸಿದರು. ಜಾಗೃತಿ ಅಭಿಯಾನದ ಭಾಗವಾಗಿ ಕರಪತ್ರಗಳನ್ನು ಹಂಚಲಾಯಿತು.

ಅಭಿಯಾನದಲ್ಲಿ ಶೌರ್ಯವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ರಶ್ಮಿತಾ ಶಿಶಿಲ, ಘಟಕ ಪ್ರತಿನಿಧಿಗಳು ಆನಂದ ನಾಯ್ಕ, ರಮೇಶ್ ಭೈರಕಟ್ಟ, ಅವಿನಾಶ್ ಭಿಡೆ, ಶೀನಪ್ಪ ಶಿಶಿಲ ಅವರು ಸಹಕರಿಸಿದರು.

ಇದೇ ಸಂದರ್ಭ, ಕಳೆದ ವರ್ಷ ಕಾಡ್ಗಿಚ್ಚಿನ ಸಂದರ್ಭದಲ್ಲಿ ಅರಣ್ಯ ಇಲಾಖೆಗೆ ಸಹಾಯ ಮಾಡಿದ ಶಿಶಿಲ ಶಾಲೆಯ ಮನೀಷ್ ಎಂಬ ಬಾಲಕನನ್ನು ಅರಣ್ಯಾಧಿಕಾರಿ ಸಚಿನ್ ಶ್ಲಾಘಿಸಿದರು.

  •  

Leave a Reply

error: Content is protected !!