ನೆಲ್ಯಾಡಿ ಗ್ರಾ.ಪಂ. ಅಭಿವೃದ್ದಿ ಪೂರಕ ಅನುದಾನ – ಇಂಟರ್ ಲಾಕ್ ಅಳವಡಿಕೆಗೆ ಶಾಸಕ ಮಂಜುನಾಥ ಭಂಡಾರಿ ವಿಶೇಷ ಅನುದಾನ

ಶೇರ್ ಮಾಡಿ

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ಹೊಸ ಗತಿ ಸಿಕ್ಕಿದ್ದು, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ವಿಶೇಷ ಅನುದಾನದಡಿ ಇಂಟರ್ ಲಾಕ್ ಅಳವಡಿಕೆಗಾಗಿ ₹2.50 ಲಕ್ಷ ಮಂಜೂರುಗೊಂಡಿದೆ.

ಈ ಹಿಂದೆ ನೆಲ್ಯಾಡಿ ಗ್ರಾಮ ಪಂಚಾಯಿತಿಗೆ ನರೇಗಾ ಯೋಜನೆಯಲ್ಲಿ ₹20 ಲಕ್ಷ, 15ನೇ ಹಣಕಾಸಿನ ಅನುದಾನದಲ್ಲಿ ₹2.60 ಲಕ್ಷ ಹಾಗೂ ವರ್ಗ 2 ಅನುದಾನದಡಿ ₹1.90 ಲಕ್ಷ ಮಂಜೂರಾಗಿದ್ದು, ಈ ಅನುದಾನದ ಮೂಲಕ ಪಂಚಾಯತಿ ಹೊಸ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಪಥದಲ್ಲಿದೆ. ಇದೀಗ ಶಾಸಕರ ವಿಶೇಷ ಅನುದಾನದಡಿ ₹2.50 ಲಕ್ಷ ಬಿಡುಗಡೆಯಾಗಿ, ಗ್ರಾಮ ಪಂಚಾಯಿತಿಗೆ ಇಂಟರ್ ಲಾಕ್ ಅಳವಡಿಕೆ ಕಾರ್ಯಕ್ಕೆ ಹೊಸ ಬಲ ದೊರಕಿದೆ.

ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಈ ಅನುದಾನ ಪ್ರಮುಖವಾಗಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದು, ಈ ಅನುದಾನ ದೊರೆಯಲು ಗ್ರಾಮ ಪಂಚಾಯತಿ ಸದಸ್ಯ ಇಕ್ಬಾಲ್ ಅವರ ಮುತುವರ್ಜಿಯೂ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಜನತೆ ಮತ್ತು ಪಂಚಾಯತಿ ಅಧಿಕಾರಿಗಳು ಅನುದಾನದ ಸರಿಯಾದ ಬಳಕೆ ಮೂಲಕ, ಗ್ರಾಮ ಪಂಚಾಯಿತಿ ಪ್ರದೇಶ ಸುಂದರ ಹಾಗೂ ಸುಸಜ್ಜಿತವಾಗುವುದೆಂದು ನಂಬಿಕೆ ವ್ಯಕ್ತಪಡಿಸಿದ್ದಾರೆ.

  •  

Leave a Reply

error: Content is protected !!