ಭರತನಾಟ್ಯ -ಸಂಗೀತ-ಯಕ್ಷಗಾನ ಕ್ಷೇತ್ರದಲ್ಲಿ ಗುರುತಿಸಿಕೊಂಡ ಅರ್ಚನಾ.ಎಸ್.ಸಂಪ್ಯಾಡಿ ಇವರು ಕರ್ನಾಟಕ ಜನಸ್ಪಂದನ ಟ್ರಸ್ಟ್ ವತಿಯಿಂದ “ಜನಸ್ಪಂದನ ಕಲಾಸಿರಿ 2022 ” ಪ್ರಶಸ್ತಿಗೆ ಆಯ್ಕೆ

ಶೇರ್ ಮಾಡಿ

ನೇಸರ ಮಾ.05:ಭರತನಾಟ್ಯ -ಸಂಗೀತ-ಯಕ್ಷಗಾನ ಕ್ಷೇತ್ರದಲ್ಲಿ ಗುರುತಿಸಿಕೊಂಡ ಕಡಬ ತಾಲೂಕಿನ ಶೀರಾಡಿ ಗ್ರಾಮದ ಸಂಪ್ಯಾಡಿಯ ಅರ್ಚನಾ ಎಸ್ ಇವರು ಕರ್ನಾಟಕ ಜನಸ್ಪಂದನ ಟ್ರಸ್ಟ್ ವತಿಯಿಂದ ” ಜನಸ್ಪಂದನ ಕಲಾಸಿರಿ 2022 ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಇವರು ಉದನೆಯ ಬಿಷಪ್ ಪಾಲಿಕಾರ್ಪೋಸ್ ಪಬ್ಲಿಕ್ ಸ್ಕೂಲಿನ 5 ನೇ ತರಗತಿಯ ವಿದ್ಯಾರ್ಥಿನಿ.ಸುದರ್ಶನ್ -ರಮ್ಯಾ ದಂಪತಿಯ ಮಗಳಾದ ಇವರಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮವು ದಿನಾಂಕ 06 -03 -2022 ನೇ ಭಾನುವಾರ ಬೆಳಿಗ್ಗೆ ಗಂಟೆ 10.00 ರಿಂದ ಸಾಯಿ ಕಲ್ಯಾಣ ಮಂಟಪ ,ಹೆಸರುಘಟ್ಟ ಮುಖ್ಯ ರಸ್ತೆ ,ಬಾಗಲಗುಂಟೆ ,ಬೆಂಗಳೂರು ನಲ್ಲಿ ನಡೆಯಲಿದೆ.ಈಕೆಯು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ,ನಟವರ್ಯ ಡಾನ್ಸ್ ಸ್ಟುಡಿಯೋ ನೆಲ್ಯಾಡಿ,ಲತೇಶ್ ಯಕ್ಷಗಾನ ಕಲಿಕಾ ಕೇಂದ್ರ ಅರಸಿನಮಕ್ಕಿ ಯಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.

ನೇಸರ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ

 

 

-ಜಾಹೀರಾತು-

Leave a Reply

error: Content is protected !!