

ನೆಲ್ಯಾಡಿ: ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿ ತಮ್ಮ ಅಪ್ರತಿಮ ಸೇವೆ ಮತ್ತು ಯಶಸ್ವಿ ಸಾಧನೆಗಾಗಿ ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ. ಕುಂಡಡ್ಕ ಅವರನ್ನು “ಆಮಂತ್ರಣ” ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ಕಡಬ ತಾಲೂಕು ಅಧ್ಯಕ್ಷರಾಗಿ ನೇಮಿಸಲಾಗಿದೆ.

ಈ ಆಯ್ಕೆ ಪ್ರಕ್ರಿಯೆಯು ಆಮಂತ್ರಣ ರಾಜ್ಯ ಸದಸ್ಯರು ಹಾಗೂ ಪ್ರಮುಖರ ನೇತೃತ್ವದಲ್ಲಿ ನೆರವೇರಿದ್ದು, ಈ ಸಂದರ್ಭದಲ್ಲಿ ರಾಜ್ಯ ಸದಸ್ಯರಾದ ಹೆಜ್ಜೆ ನಯನಾಡು, ಅಶಾ ಅಡೂರು, ಉಮಾ ಸುನಿಲ್ ಹಾಸನ ಜಿಲ್ಲಾಧ್ಯಕ್ಷರಾದ ನಿರೀಕ್ಷಿತ ಮಂಗಳೂರು ಮತ್ತು ಜಿಲ್ಲಾ ಉಪಾಧ್ಯಕ್ಷರಾದ ವಿಂದ್ಯಾ ಎಸ್. ರೈ ಕಡೆಶೀವಾಲಯ, ನಿರ್ದೇಶಕರಾದ ಚೇತನ್ ಕುಮಾರ್ ಅಮ್ಮೆ, ಬಂಟ್ವಾಳ ತಾಲ್ಲೂಕು ಅಧ್ಯಕ್ಷರಾದ ರಶ್ಮಿತಾ ಎಸ್. ಯೋಗಿವೆಟ್ಟು, ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ವಿದ್ಯಾಶ್ರೀ ಆಡೂರು ಉಪಸ್ಥಿತರಿದ್ದರು.
ವಿಶ್ವನಾಥ ಶೆಟ್ಟಿ ಅವರ ನೇಮಕಾತಿ ಸಹಭಾಗಿತ್ವ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಇನ್ನಷ್ಟು ಉತ್ತೇಜಿಸಲಿದೆ ಎಂಬ ನಂಬಿಕೆ ಎಲ್ಲರಲ್ಲೂ ವ್ಯಕ್ತವಾಗಿದೆ. ತಮ್ಮ ಹೊಸ ಜವಾಬ್ದಾರಿಯಡಿಯಲ್ಲಿ ಅವರು ಕಡಬ ತಾಲೂಕು ಮಟ್ಟದಲ್ಲಿ ಆಮಂತ್ರಣ ವೇದಿಕೆಯ ಪದಾಧಿಕಾರಿಗಳನ್ನು ಶೀಘ್ರದಲ್ಲಿ ನೇಮಕ ಮಾಡಿಕೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಆಮಂತ್ರಣ ಪರಿವಾರದ ಪರವಾಗಿ ವಿಜಯ ಕುಮಾರ್ ಜೈನ್, ಅಳದಂಗಡಿ ಅವರು ಪ್ರಕಟಣೆ ಮೂಲಕ್ಕೆ ತಿಳಿಸಿದ್ದಾರೆ.





