


ನೆಲ್ಯಾಡಿ: ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜು ನಲ್ಲಿ ಕಲಾ ವಿಭಾಗ ಮತ್ತು ಮಾನವಿಕ ಸಂಘದ ಆಶ್ರಯದಲ್ಲಿ “Dreams 2025” ಫೆಸ್ಟ್ ಆಯೋಜಿಸಲಾಗಿತ್ತು. ಈ ಫೆಸ್ಟ್‌ನ ಭಾಗವಾಗಿ ನಡೆದ ಕ್ವಿಜ್ ಸ್ಪರ್ಧೆಯಲ್ಲಿ ನೆಲ್ಯಾಡಿ ವಿ.ವಿ ಕಾಲೇಜು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಹರ್ಷಿತ್ (ತೃತೀಯ ಬಿ.ಎ.) ಮತ್ತು ಜಿ. ವಿವೇಕ್ ಬೆಳ್ಯಪ್ಪ ಅವರು ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ಡಾ. ನೂರಂದಪ್ಪ, ಕನ್ನಡ ಉಪನ್ಯಾಸಕರು ಮಾರ್ಗದರ್ಶನ ನೀಡಿದ್ದರು.




