

ತಿರುವನಂತಪುರಂ: ಕೇರಳದ ಕಾಸರಗೋಡಿನಲ್ಲಿ ಅಚ್ಚರಿಯ ಘಟನೆ ನಡೆದಿದೆ. 46 ವರ್ಷದ ವ್ಯಕ್ತಿಯ ಮರ್ಮಾಂಗದಲ್ಲಿ ಮೂರು ದಿನಗಳಿಂದ ಸಿಲುಕಿದ್ದ ಯಂತ್ರದ ವಾಷರ್‌ನ್ನು ತೆಗೆಯಲು ಆಸ್ಪತ್ರೆಯ ವೈದ್ಯರು ಅಗ್ನಿಶಾಮಕ ದಳದ ಸಹಾಯ ಕೋರಬೇಕಾಯಿತು.

ಜಿಲ್ಲಾ ಆಸ್ಪತ್ರೆಯ ವೈದ್ಯರು ಮಾ.25ರ ರಾತ್ರಿ 10 ಗಂಟೆ ಸುಮಾರಿಗೆ ಅಗ್ನಿಶಾಮಕ ದಳವನ್ನು ಸಂಪರ್ಕಿಸಿದರು. ತಕ್ಷಣವೇ ಕಾಞಂಗಾಡ್‌ನ ಅಗ್ನಿಶಾಮಕ ಮತ್ತು ರಕ್ಷಣಾ ತಂಡದ ಐವರು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು.
ವ್ಯಕ್ತಿಯ ಖಾಸಗಿ ಭಾಗದಲ್ಲಿ ವಾಷರ್ ಸಿಲುಕಿದ್ದರಿಂದ ತೀವ್ರ ಊತ ಉಂಟಾಗಿದ್ದು, ಮೂತ್ರ ವಿಸರ್ಜನೆಗೆ ತೊಂದರೆ ಆಗಿತ್ತು. ಈ ವಾಷರ್‌ನ್ನು ತೆಗೆಯಲು ವೈದ್ಯರು ಅನಸ್ತೇಷಿಯಾ ನೀಡಿ, ಅಗ್ನಿಶಾಮಕ ಸಿಬ್ಬಂದಿ ಬೆರಳಿನಲ್ಲಿ ಸಿಲುಕಿದ ಉಂಗುರ ತೆರವುಗೆ ಬಳಸುವ ರಿಂಗ್ ಕಟ್ಟರ್ ಉಪಯೋಗಿಸಿ, ಎರಡು ಗಂಟೆಗಳ ಪ್ರಕ್ರಿಯೆಯ ನಂತರ ಯಶಸ್ವಿಯಾಗಿ ವಾಷರ್‌ನ್ನು ತೆಗೆಯಲು ಸಾಧ್ಯವಾಯಿತು.
ವ್ಯಕ್ತಿಯು ಕುಡಿದ ಮತ್ತಿನಲ್ಲಿದ್ದಾಗ ಯಾರೋ ವಾಷರ್ ಹಾಕಿರುವುದಾಗಿ ವೈದ್ಯರ ಬಳಿ ಹೇಳಿಕೊಂಡಿದ್ದಾನೆ. ಈ ಘಟನೆ ವೈದ್ಯಕೀಯ ಮತ್ತು ರಕ್ಷಣಾ ತಂಡದ ಸಹಕಾರದೊಂದಿಗೆ ಯಶಸ್ವಿಯಾಗಿ ಪರಿಹಾರ ಕಂಡುಕೊಂಡಿದೆ.





