ನೆಲ್ಯಾಡಿ/ಕೊಕ್ಕಡ: ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ

ಶೇರ್ ಮಾಡಿ

ನೆಲ್ಯಾಡಿ/ಕೊಕ್ಕಡ: ಪವಿತ್ರ ರಮಝಾನ್‌ನ 29 ವೃತಗಳನ್ನು ಅನುಷ್ಠಾನಗೊಳಿಸಿದ ಕರಾವಳಿಯ ಮುಸ್ಲಿಮರು ಇಂದು ಮುಂಜಾನೆಯಿಂದ ಅತ್ಯಂತ ಸಡಗರ, ಸಂಭ್ರಮದಿಂದ ‘ಈದುಲ್ ಫಿತ್ರ್’ ಹಬ್ಬವನ್ನು ಆಚರಿಸಿದರು. ನೆಲ್ಯಾಡಿ, ಹೊಸಮಜಲು, ಕೊಣಾಲು, ಕೊಕ್ಕಡ, ಮಲ್ಲಿಗೆಮಜಲು, ಬೋಳದಬೈಲು ಮೊದಲಾದ ಮಸೀದಿಗಳಲ್ಲಿ ಸಾಮೂಹಿಕ ವಿಶೇಷ ನಮಾಝ್ ನೆರವೇರಿತು. ಈದ್ ಸಂದೇಶ ಹಾಗೂ ಧಾರ್ಮಿಕ ಪ್ರವಚನಗಳ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನದ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಭೇಟಿ ನೀಡುವುದರ ಮೂಲಕ ಸಹೋದರತ್ವವನ್ನು ಮೆರೆದರು.

ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ತನಕ ಉಪವಾಸಿಗರು ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ, ವಿಶೇಷ ತಿಂಡಿ-ತಿನಿಸುಗಳನ್ನು ಸೇವಿಸಿ ಹಬ್ಬವನ್ನು ಶ್ರದ್ಧಾ ಮತ್ತು ಭಕ್ತಿಯಿಂದ ಆಚರಿಸಿದರು. ಈ ಸಂದರ್ಭದಲ್ಲಿ ವಿವಿಧ ಮಸೀದಿಗಳಲ್ಲಿ ಹಬ್ಬದ ಸಂದೇಶ ನೀಡಲಾಯಿತು. ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಖತೀಬರಾದ ಸೌಕತ್ಅಲಿ ಅಲ್ ಅಮಾನಿ ಧಾರ್ಮಿಕ ನೇತೃತ್ವವನ್ನು ವಹಿಸಿದರು.

ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಎನ್.ಎಸ್.ಸುಲೈಮಾನ್, ಉಪಾಧ್ಯಕ್ಷ ಎಂ.ಹನೀಫ್ ಕರಾವಳಿ, ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಶಾಂತಿಬೆಟ್ಟು, ಕಾರ್ಯದರ್ಶಿಗಳಾದ ಅಬ್ದುಲ್ ಜಬ್ಬಾರ್, ಇಸ್ಮಾಯಿಲ್ ಎಸ್.ಎಮ್, ಕೋಶಾದಿಕಾರಿ ಉಮ್ಮರ್ ತಾಜ್, ಲೆಕ್ಕಪರೀಶೋಧಕ ಹಾಗೂ ನ್ಯಾಯವಾದಿ ಎನ್.ಇಸ್ಮಾಯಿಲ್ ನೆಲ್ಯಾಡಿ, ಮಾಜಿ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಸಿಟಿ, ನಿಯಾಜ್ ಸಾಹೇಬ್, ಅಶ್ರಫ್ ಶಕ್ತಿ, ಗ್ರಾ.ಪಂ.ಸದಸ್ಯರಾದ ಮೊಹಮ್ಮದ್ ಇಕ್ಬಾಲ್, ಅಬ್ದುಲ್ ಜಬ್ಬಾರ್. ಪ್ರಮುಖರಾದ ನಾಝೀಂ ಸಾಹೇಬ್ ಉಪಸ್ಥಿತರಿದ್ದರು.

ಕೊಕ್ಕಡ-ಮಲ್ಲಿಗೆಮಜಲು ಪಝಲ್ ಜಿಮ್ಮಾ ಮಸೀದಿಯಲ್ಲಿ ಖತೀಬರಾದ ಆಶೀಫ್ ಫೈಝಿ ಪಾಡವರಕಲ್ಲು ಧಾರ್ಮಿಕ ನೇತೃತ್ವವನ್ನು ವಹಿಸಿದರು. ಆಡಳಿತ ಸಮಿತಿಯ ಅಧ್ಯಕ್ಷ ಉಮ್ಮರ್ ಬೈಲಂಗಡಿ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ಬೀಳ್ಕೊಡುಗೆ ಸಮಾರಂಭ
ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸಿ ಈಗ ವರ್ಗಾವಣೆಗೊಂಡು ತೆರಳುತ್ತಿರುವ ಸೌಕತ್ಅಲಿ ಅಲ್ ಅಮಾನಿ ಅವರಿಗೆ ಸಮಿತಿಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಯಿತು. ಅವರ ಸೇವೆಗಳನ್ನು ಸ್ಮರಿಸಿ, ಸನ್ಮಾನಿಸಿ ಮುಂದಿನ ಜೀವನಕ್ಕೆ ಶುಭ ಹಾರೈಸಲಾಯಿತು. ಸಮಾರಂಭದಲ್ಲಿ ಮಸೀದಿ ಆಡಳಿತ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

  •  

Leave a Reply

error: Content is protected !!