

ವಿಟ್ಲ : ಕೂಡೂರು ಸಮೀಪ್ಲದ ಸೇರಾಜೆ ನಿವಾಸಿ ತುಳು ರಂಗಭೂಮಿ ಕಲಾವಿದಸುರೇಶ್ ವಿಟ್ಲ ( 40)ಎ. 6ರ ಭಾನುವಾರ ನಿಧನರಾದರು.
ಅವರಿಗೆ ಪತ್ನಿ ,ಪುತ್ರ ಇದ್ದಾರೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅನಂತರ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ರವಾನಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತ ಹೊಂದಿರುವುದು ತಿಳಿದು ಬಂದಿದೆ.
ಕಳೆದ ಸುಮಾರು ಎರಡು ದಶಕಗಳಿಂದ ತುಳು ರಂಗಭೂಮಿಯಲ್ಲಿ ಯಶಸ್ವೀ ಕಲಾವಿದನಾಗಿ ಗುರುತಿಸಿಕೊಂಡಿದ್ದ ಸುರೇಶ್ ವಿಟ್ಲ ಜಿಲ್ಲೆಯಾದ್ಯಂತ ಸಾವಿರಾರು ತುಳು ನಾಟಕ ಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ಸೇವೆ ನೀಡಿದ್ದರು. ಐವತ್ತಕ್ಕೂ ಹೆಚ್ಚು ಪ್ರಶಸ್ತಿಗಳನ್ನೂ ಪಡೆದಿದ್ದ ಸುರೇಶ್ ವಿಟ್ಲ ಮಂಜೇಶ್ವರದ ಶಾರದಾ ಆರ್ಟ್ಸ್ ಸಂಸ್ಥೆಯ ಕಲಾವಿದರಾಗಿದ್ದರು









