

ನೆಲ್ಯಾಡಿ: ನೆಲ್ಯಾಡಿಯ ಪಿಎಂಶ್ರೀ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ಮುಂಭಾಗದಲ್ಲಿರುವ ಅವನಿ ಆರ್ಕೇಡ್‌ನ ಮೊದಲ ಮಹಡಿಯಲ್ಲಿ “ಅಲಂಗಡೆ ದಂತ ಚಿಕಿತ್ಸಾಲಯ – ರೂಟ್ ಕೆನಾಲ್ ಮತ್ತು ಇಂಪ್ಲಾಂಟ್ ಸೆಂಟರ್” ಎಂಬ ಹೆಸರಿನಲ್ಲಿ ನೂತನ ದಂತ ಚಿಕಿತ್ಸಾ ಕೇಂದ್ರವು ಎ.9ರಂದು ಶುಭಾರಂಭಗೊಂಡಿತು.ಕುಲ ಪುರೋಹಿತರಾದ ಗೋಪಾಲಕೃಷ್ಣ ಮಿತ್ತೂರು ಅವರು ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿದರು.


ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಪ್ಪಿನಂಗಡಿಯ ಖ್ಯಾತ ವೈದ್ಯರಾದ ಡಾ.ಎಂ.ಎನ್. ಭಟ್ ದೀಪ ಬೆಳಗಿಸಿ ಸಂಸ್ಥೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಾ, “ಶಿಕ್ಷಣದ ನಂತರ ತಾವು ಹಳ್ಳಿಯಲ್ಲಿಯೇ ಕ್ಲಿನಿಕ್ ಸ್ಥಾಪಿಸಿ, ಸಮುದಾಯದ ಸೇವೆಗೆ ಮುಂದಾಗಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಅಪೂರ್ವವಾದ ಹೆಜ್ಜೆ. ಇಲ್ಲಿ ಗುಣಮಟ್ಟದ ಚಿಕಿತ್ಸೆ, ತಾಂತ್ರಿಕವಾಗಿ ನಿಖರವಾದ ಉಪಕರಣಗಳೊಂದಿಗೆ ನೀಡಲಾಗುತ್ತಿದ್ದು, ಇದು ಗ್ರಾಮೀಣ ಪ್ರದೇಶದ ಜನತೆಗೆ ಅತ್ಯಂತ ಹಿತಕರ ಬೆಳವಣಿಗೆ, ಬರುವಂತಹ ರೋಗಿಗಳಿಗೆ ಆರೋಗ್ಯಕರವಾದಂತಹ, ಕಡಿಮೆ ವೆಚ್ಚದಲ್ಲಿ ನಗುಮುಖದಿಂದ ಸೇವೆಯನ್ನು ನೀಡುವುದು ವೈದ್ಯರಾದ ನಮ್ಮ ಕರ್ತವ್ಯವಾಗಿದೆ. ಸೇವೆಗೆ ಯಾವುದೇ ರೀತಿ ಚುತ್ತಿ ಬಾರದ ರೀತಿಯಲ್ಲಿ ಪ್ರಾಮಾಣಿಕ ಸೇವೆಯನ್ನು ನೀಡುತ್ತಾ ಈ ಕ್ಲಿನಿಕ್ ಮುಂದುವರಿಯಲಿ ಎಂದು ಶುಭವನ್ನು ಹಾರೈಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮಕ್ಕಳ ತಜ್ಞ ಡಾ.ರಾಘವೇಂದ್ರ ಪಿದಮಲೆ, ಪುತ್ತೂರು ಸರಕಾರಿ ಆಸ್ಪತ್ರೆಯ ಡಾ.ಶಿವರಾಮ ಪನ್ಯ, ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ನೆಲ್ಯಾಡಿ-ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್, ಕಟ್ಟಡ ಮಾಲಕರಾದ ಡಾ.ಪ್ರಸಾದ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕ್ಲಿನಿಕ್‌ನ ಮುಖ್ಯ ವೈದ್ಯರಾದ ಡಾ.ಈಶ ಕೃಷ್ಣ ಭಟ್ ಅವರ ಕುಟುಂಬಸ್ಥರಾದ ಅಜ್ಜಿ ಸರಸ್ವತಿ, ತಂದೆ ವೆಂಕಟರಮಣ ಭಟ್, ತಾಯಿ ಸರಸ್ವತಿ, ಬಂಧುಮಿತ್ರರು ಹಾಗೂ ವೈದ್ಯಕೀಯ ಕ್ಷೇತ್ರದವರಾದ ಡಾ.ಜೈದೀಪ್, ಡಾ.ಅನೀಶ್, ಡಾ.ಕೃಷ್ಣಮೂರ್ತಿ ಮತ್ತು ಬಂಧುಗಳು ಹಾಗೂ ಹಿತೈಷಿಗಳು, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೃಷ್ಣ ಭಟ್ ಉಳಿಯ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ಈಶ ಕೃಷ್ಣ ಭಟ್ ವಂದಿಸಿದರು.
ಸೇವಾ ಸೌಲಭ್ಯ:
ಹಲ್ಲಿನ ತಪಾಸಣೆ, ನೋವಿಲ್ಲದ ಹಲ್ಲು ಕೀಳುವುದು, ವಕ್ರದಂತ (ಕ್ಲಿಪ್) ಚಿಕಿತ್ಸೆ, ಹಲ್ಲು ಸ್ವಚ್ಛತೆ ಮತ್ತು ಪಾಲಿಶ್, ರೂಟ್ ಕೆನಾಲ್ ಚಿಕಿತ್ಸೆ, ಕೃತಕ ದಂತ ಜೋಡಣೆ, ಡೆಂಟಲ್ ಇಂಪ್ಲಾಂಟ್, ಎಕ್ಸ್ರೇ, ಹಲ್ಲಿನ ಬಣ್ಣದ ಫಿಲ್ಲಿಂಗ್ ಹಾಗೂ ಸಂದು ಹಲ್ಲು ಫಿಲ್ಲಿಂಗ್ ಸೇರಿದಂತೆ ಹಲವು ಆಧುನಿಕ ಚಿಕಿತ್ಸೆ ಲಭ್ಯವಿದೆ.
ನೋಂದಣಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8197741311 ಅನ್ನು ಸಂಪರ್ಕಿಸಬಹುದು










