

ಕೊಕ್ಕಡ: ಹತ್ಯಡ್ಕ ಗ್ರಾಮದ ಅರಿಕೆಗುಡ್ಡೆಯ ವನದುರ್ಗಾ ದೇವಿ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಿತವಾದ ಶ್ರೀ ವನದುರ್ಗಾ ಸಭಾಭವನ ವು ಅದ್ಧೂರಿಯಾಗಿ ಲೋಕಾರ್ಪಣೆಯಾಯಿತು.

ಎ.18ರಂದು ಶ್ರೀ ಹೊಳಲಿ ವೇದಮೂರ್ತಿ ಸುಬ್ರಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಾಸ್ತು ರಕ್ಷಾ ಹೋಮ ಮತ್ತು ವಾಸ್ತು ಪೂಜೆಯೊಂದಿಗೆ ಕಾರ್ಯಕ್ರಮ ನಡೆಯಿತು. ಎ.19 ರಂದು ಬೆಳಗ್ಗೆ, ಗಣಪತಿ ಹೋಮದ ನಂತರ ಹಾಲು ಉಕ್ಕಿಸುವ ಶ್ರದ್ಧಾ ಕಾರ್ಯಕ್ರಮ ನಡೆಯಿತು.

ಸಂಪುಟ ನರಸಿಂಹ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಭಾಭವನವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ಅವರು ಮಾತನಾಡುತ್ತಾ, “ಸನಾತನ ಧರ್ಮ ಸಂಸ್ಕೃತಿಗೆ ಬೆಲೆ ಅಪಾರ. ಮಕ್ಕಳಿಗೆ ಬಾಲ್ಯದಲ್ಲಿಯೇ ಧರ್ಮದ ಅರಿವು ಮೂಡಿಸುವುದು ಅವಶ್ಯಕ. ಈ ಸಭಾಭವನದ ನಿರ್ಮಾಣ ಬಡಜನರಿಗೂ ಸಹಾಯಕರಾಗಿದ್ದು ದೇವರ ಸಾನ್ನಿಧ್ಯಕ್ಕೆ ಹತ್ತಿರವಾಗಿದೆ” ಎಂದರು.
ಸಂಸದ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಖ್ಯಾತ ಜ್ಯೋತಿಷಿ ಮದ್ವರಾಯ ಭಟ್, ಖ್ಯಾತ ಪುರೋಹಿತ ಪ್ರಹ್ಲಾದ್ ತಾಮನ್ಕರ್, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಶ್ರೀನಿವಾಸ್ ಪುಟಾಣಿ, ಅರಸಿನಮಕ್ಕಿ ಗ್ರಾ.ಪಂ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್, ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಂಗದಾಮ್ಲೆ, ಅರ್ಚಕರಾದ ಉಲ್ಲಾಸ್ ಭಟ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಸಭಾಭವನ ನಿರ್ಮಾಣಕ್ಕಾಗಿ ಶ್ರಮಿಸಿದ ಪ್ರಮುಖರಾದ ಸಂಜೀವ ಶೆಟ್ಟಿಗಾರ್, ತಮ್ಮಯ್ಯ ಶೆಟ್ಟಿಗಾರ್, ಆನಂದ ಶೆಟ್ಟಿಗಾರ್, ವಸಂತ ಶೆಟ್ಟಿಗಾರ್, ರೋಹಿತಾಶ್ವ ಶೆಟ್ಟಿಗಾರ್, ನಾರಾಯಣ ಆಚಾರ್ಯ, ರಾಮಕೃಷ್ಣ ಶೆಟ್ಟಿಗಾರ್, ಹರಿಶ್ಚಂದ್ರ ಶೆಟ್ಟಿಗಾರ್ ಮತ್ತು ಆನಂದ ಅಡಪ ರವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಿತು.
ನೀತಾ, ರೇಷ್ಮಾ, ಪ್ರಮೀಳಾ ಮತ್ತು ಧನವತಿ ಪ್ರಾರ್ಥನೆ ಸಲ್ಲಿಸಿದರು. ದೇವಳದ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ ಸ್ವಾಗತಿಸಿದರು. ವೃಶಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಊರ, ಪರಊರ ಭಕ್ತರು, ದೇವಳದ ಸರ್ವ ಸದಸ್ಯರು ಭಕ್ತಿಭಾವದಿಂದ ಭಾಗವಹಿಸಿದ್ದರು.









