ಇಚ್ಲಂಪಾಡಿ: ಸ್ಕೂಟರ್‌ಗಳ ಡಿಕ್ಕಿ-ಸವಾರನಿಗೆ ಗಾಯ

ಶೇರ್ ಮಾಡಿ

ನೆಲ್ಯಾಡಿ: ಸ್ಕೂಟರ್‌ಗಳ ನಡುವೆ ಡಿಕ್ಕಿ ಸಂಭವಿಸಿ ಸವಾರರೊಬ್ಬರು ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಎ.19ರಂದು ಮಧ್ಯಾಹ್ನ ಇಚ್ಲಂಪಾಡಿ ಗ್ರಾಮದ ಪೈಸಾರಿ ಎಂಬಲ್ಲಿ ನಡೆದಿದೆ.

ಇಚ್ಲಂಪಾಡಿ ಬಿಜೇರು ನಿವಾಸಿ ವೆಂಕಟೇಶ ಗೌಡ(59ವ.)ಗಾಯಗೊಂಡವರಾಗಿದ್ದಾರೆ. ವೆಂಕಟೇಶ ಅವರು ತನ್ನ ಮನೆಯಿಂದ ನೆಲ್ಯಾಡಿ ಪೇಟೆಗೆ ಸ್ಕೂಟರ್ ನಲ್ಲಿ ಹೋಗಿ ವಾಪಾಸು ಬಿಜೇರು ಮನೆಗೆ ಹೋಗುತ್ತಿದ್ದ ವೇಳೆ ಇಚ್ಲಂಪಾಡಿ ಗ್ರಾಮದ ಪೈಸಾರಿ ಎಂಬಲ್ಲಿಗೆ ಮಧ್ಯಾಹ್ನ 1.15ಕ್ಕೆ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಬೀಜೇರು ಕಡೆಯಿಂದ ಇಚ್ಲಂಪಾಡಿ ಕಡೆಗೆ ಜಯಾನಂದ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದೆ.

ಘಟನೆಯಲ್ಲಿ ವೆಂಕಟೇಶ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ವೆಂಕಟೇಶ ಅವರ ಮಗ ಯೋಗೀಶ್‌ರವರು ಕಾರಿನಲ್ಲಿ ಗಾಯಾಳುವನ್ನು ಪುತ್ತೂರಿನ ಹಿತ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಿದ್ದಾರೆ. ಈ ಬಗ್ಗೆ ವೆಂಕಟೇಶ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  •  

Leave a Reply

error: Content is protected !!