

ಶಿಶಿಲ: ಶಿವಕೀರ್ತಿ ನಿಲಯದಲ್ಲಿ ಹನುಮಾನ್ ಜಯಂತಿ ಅಂಗವಾಗಿ ಭಕ್ತಿಪೂರ್ಣ ಕಾರ್ಯಕ್ರಮ ನಡೆಯಿತು.

ಅರಿಕೆಗುಡ್ದೆ ಶ್ರೀ ವನದುರ್ಗಾ ದೇವಾಲಯದ ಅಧ್ಯಕ್ಷರಾದ ಪ್ರಕಾಶ ಪಿಲಿಕಬೆ ಕಾರ್ಯಕ್ರಮವನ್ನು ಉದ್ಘಾಟಿಸಿ ಹನುಮನ ಸ್ವಾಮಿ ಭಕ್ತಿ ಎಂಬ ಭಾವಚಿತ್ರದಲ್ಲಿ ಭಜಕರಿಗೂ ದಾರಿದೀಪವನ್ನಾಗಿ. ಹನುಮಂತನು ಶ್ರದ್ಧೆ, ಶಕ್ತಿ, ಧೈರ್ಯದ ಸಂಕೇತ ಎಂದು ಅವರು ಅಭಿಪ್ರಾಯಪಟ್ಟರು. ಹನುಮಂತನ ಭಕ್ತಿ ರಾಷ್ಟ್ರಕ್ಕೂ ಶಕ್ತಿ ತುಂಬಲಿ ಎಂದು ಆಶೀರ್ವದಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜೀವ ವಿಮಾ ಬೆಳ್ತಂಗಡಿಯ ಅಧಿಕಾರಿ ಉದಯಶಂಕರ ಅರಸಿನಮಕ್ಕಿ ಉಪಸ್ಥಿತರಿದ್ದು, ಹನುಮಂತನ ಶಕ್ತಿಯು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ತೇಜಸ್ಸನ್ನು ತುಂಬಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ, ಕಾಸರಗೋಡು ಜಿಲ್ಲೆಯ ಹಿರಿಯ ಭಜನಾ ಪಟು ಹರಿದಾಸ ಜಯಾನಂದ ಹಾಗೂ ಭಜನಾ ಸಾಧಕ ಬಾಲಕೃಷ್ಣ ಪಂಜ ಅವರಿಗೆ ಮನೆಯ ಪರವಾಗಿ ಜಯರಾಮ ನೆಲ್ಲಿತ್ತಾಯ ಮತ್ತು ರೇಖಾ ಜಯರಾಮ ನೆಲ್ಲಿತ್ತಾಯ ಅವರು ಸನ್ಮಾನಿಸಿದರು.
ರಾಘವೇಂದ್ರ ಕಿಗ್ಗ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತಾಲೂಕಿನ ವಿವಿಧ ಭಜನಾ ಮಂಡಳಿಗಳ ಭಜಕರು ಭಕ್ತಿ ಭಾವದಿಂದ ಭಜನೆ ಮತ್ತು ಕುಣಿತ ಪ್ರದರ್ಶಿಸಿದರು. ಬಿಳಿನೆಲೆ ಭಜನಾ ಮಂಡಳಿಯ ಸುಂದರ ಮತ್ತು ತಂಡ, ಹರಿದಾಸ ಜಯಾನಂದ ಕಾಸರಗೋಡು ಅವರ ತಂಡ ಭಜನಾ ಕಾರ್ಯಕ್ರಮವನ್ನು ನಿರ್ವಹಿಸಿದರು.
ಬೆಳ್ತಂಗಡಿ, ಪುತ್ತೂರು ಮತ್ತು ಕಾಸರಗೋಡು ಭಾಗದ ವಿವಿಧ ಭಜನಾ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಭ್ರಮವನ್ನು ಹೆಚ್ಚಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ, ಶಿವಕೀರ್ತಿ ನಿಲಯದ ಜಯರಾಮ ನೆಲ್ಲಿತ್ತಾಯ ದಂಪತಿಗಳು, ಮನೆಯ ಪರವಾಗಿ, ಎಲ್ಲ ಭಾಗವಹಿಸಿದ ಭಜಕರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.













