

ನೆಲ್ಯಾಡಿ: ಕೊಣಾಲು ಗ್ರಾಮದ ಕಡೆಂಬಿಲ ನಿವಾಸಿ ದಿ. ವಿಶ್ವನಾಥ ಶೆಟ್ಟಿ ಅವರ ಪತ್ನಿ ಲೀಲಾವತಿ ಶೆಟ್ಟಿ (68) ಅವರು ಕೆಲ ಕಾಲದಿಂದ ಅಸೌಖ್ಯದಿಂದ ಬಳಲುತ್ತಿದ್ದು ಮಂಗಳವಾರದಂದು ನಿಧನರಾದರು.
ಮೃತರ ಪುತ್ರ ರಘುರಾಮ ಶೆಟ್ಟಿ ದಾಮ್ರೋ ಫರ್ನಿಚರ್ ಕಂಪೆನಿಯ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಪುತ್ರಿ ಶಶಿಕಲಾ, ಸೊಸೆ, ಅಳಿಯ ಹಾಗೂ ಮೊಮ್ಮಕ್ಕಳು ಇದ್ದಾರೆ.














