

ಮಂಗಳೂರು: ಕರಾವಳಿಯ ಜನಮನದಲ್ಲಿ ಆಳವಾದ ನಂಬಿಕೆ ಹೊಂದಿರುವ ದೈವ ಕೊರಗಜ್ಜನ ಕಟ್ಟೆಯಲ್ಲಿ ಕಳ್ಳತನದ ಘಟನೆ ನಡೆದಿದೆ. ಮಂಗಳೂರು ಮೇರಿಹಿಲ್ ಪ್ರದೇಶದಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ಭಕ್ತಿಭಾವದಿಂದ ನಮಸ್ಕರಿಸಿ, ಮೂರು ಸುತ್ತು ಸುತ್ತಿದ ಕಳ್ಳನೊಬ್ಬ, ನಂತರ ಕಾಣಿಕೆ ಹುಂಡಿಯನ್ನು ಹೊತ್ತೊಯ್ಯುವ ಕೃತ್ಯ ನಡೆಸಿದ್ದಾನೆ.
ಸುತ್ತಮುತ್ತ ಯಾರೂ ಇಲ್ಲ ಎಂದು ಖಚಿತಪಡಿಸಿಕೊಂಡ ನಂತರ ಕಳ್ಳ ಈ ದುಷ್ಕೃತ್ಯವೆಸಗಿದ್ದು, ಘಟನೆ ಸಂಬಂಧಿತ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.














