9ನೇ ತರಗತಿಯ ಸ್ನೇಹಿತನನ್ನೇ ಕೊಂದ 6ನೇ ತರಗತಿಯ ಬಾಲಕ..!

ಶೇರ್ ಮಾಡಿ

ಪರಸ್ಪರ ಪರಮಾಪ್ತ ಸ್ನೇಹಿತರಾದ ಇಬ್ಬರು ಬಾಲಕರ ನಡುವಿನ ಆಟವಾಡುವ ಜಗಳವು ಕೊಲೆಯಲ್ಲಿ ಅಂತ್ಯಗೊಂಡಿರುವ ಹೃದಯವಿದ್ರಾವಕ ಘಟನೆ ಹುಬ್ಬಳ್ಳಿ ನಗರದ ಗುರುಸಿದ್ದೇಶ್ವರ ನಗರದಲ್ಲಿ ನಡೆದಿದೆ.

ಹದಿನೈದು ವರ್ಷದ ಚೇತನ್ ಮನೆ ಎದುರಿನ ಸ್ನೇಹಿತನಾಗಿದ್ದ ಹದಿಮೂರು ವರ್ಷದ ಬಾಲಕನು ಚಾಕುವಿನಿಂದ ಇರಿದು ಕೊಂದ ಘಟನೆ ನಡೆದಿದೆ. ಆಟವಾಡುವ ವೇಳೆಯಲ್ಲಿ ಉಂಟಾದ ಕಿರಿಕ್ ಜಗಳದಿಂದ ಕೋಪಗೊಂಡ ಬಾಲಕನು ಮನೆಗೆ ಹೋಗಿ ಚಾಕು ತಂದು, ಚೇತನನ ಹೊಟ್ಟೆಯ ಎಡಬಾಗದಲ್ಲಿ ಇರಿದಿದ್ದಾನೆ.ಗಂಭೀರವಾಗಿ ಗಾಯಗೊಂಡ ಚೇತನ್ ಅನ್ನು, ತಕ್ಷಣವೇ ಕೊಲೆ ಮಾಡಿದ ಬಾಲಕನ ತಾಯಿಯೇ ಆಸ್ಪತ್ರೆಗೆ ಕರೆದೊಯ್ದರೂ, ಆಸ್ಪತ್ರೆ ತಲುಪುವ ಮುನ್ನವೇ ಚೇತನ್ ಮೃತಪಟ್ಟಿದ್ದಾನೆ.

ಈ ಘಟನೆ ಕೇಳಿ ಹುಬ್ಬಳ್ಳಿ ನಗರದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಕುರಿತು ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಾಲಕನನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.

ಇಂತಹ ಘಟನೆಗಳು ಪುಟ್ಟ ಮಕ್ಕಳ ಮನಸ್ಸುಗಳ ತೀವ್ರತೆಗೆ ತೀವ್ರ ಎಚ್ಚರಿಕೆಯನ್ನು ನೀಡುತ್ತಿವೆ. ಪಾಲಕರು ತಮ್ಮ ಮಕ್ಕಳ ವರ್ತನೆ, ಸಂಗತಿಗಳು, ಆಟಗಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕೆಂದು ಪೊಲೀಸ್ ಆಯುಕ್ತರು ಕರೆ ನೀಡಿದ್ದಾರೆ.

  •  

Leave a Reply

error: Content is protected !!