ಸೌತಡ್ಕ ಮಹಾಗಣಪತಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆ: ಅಧ್ಯಕ್ಷರಾಗಿ 3ನೇ ಬಾರಿಗೆ ಸುಬ್ರಹ್ಮಣ್ಯ ಶಬರಾಯ ಆಯ್ಕೆ

ಶೇರ್ ಮಾಡಿ

ಕೊಕ್ಕಡ: ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು, ಮೂರನೇ ಬಾರಿಗೆ ಸಮಿತಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ.ಕೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೌತಡ್ಕ ದೇವಸ್ಥಾನದಲ್ಲಿ ದೇಗುಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿ ಶ್ರೀನಿವಾಸ್ ಅವರು ಸಮಿತಿಯ ಇತರೆ ಸದಸ್ಯರ ಸಮ್ಮುಖದಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ನೂತನ ಸಮಿತಿಗೆ ಅಧಿಕಾರ ಅಧಿಕಾರ ಹಸ್ತಾಂತರ ಮಾಡಿದರು. ನೂತನ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ.ಕೆ ಅವರು ಅಧಿಕಾರ ಸ್ವೀಕರಿಸಿದರು.

ರಾಜ್ಯ ಸರ್ಕಾರ ಫೆ.18 ಮತ್ತು ಮಾ.3ರಂದು ರಚನೆ ಮಾಡಿದ್ದ ಎರಡೂ ಸಮಿತಿಗಳನ್ನು ಹೈಕೋರ್ಟ್ ರದ್ದುಪಡಿಸಿ, ಹೊಸ ಸಮಿತಿ ಮಾಡುವಂತೆ ಆದೇಶ ನೀಡಿತ್ತು.

ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಸದಸ್ಯರ ನೇಮಕಾತಿಯ ಪಟ್ಟಿ ಬಿಡುಗಡೆಗೊಂಡು ಕೆಲವು ಬದಲಾವಣೆಗಳ ಬಳಿಕ ಅಧ್ಯಕ್ಷರ ನೇಮಕಾತಿಯು ನಡೆದಿತ್ತು. ನೇಮಕಾತಿಯಾದ ಎರಡೇ ದಿನಗಳಲ್ಲಿ ಪ್ರಾರಂಭದ ಪಟ್ಟಿಯಲ್ಲಿ ಸದಸ್ಯರಾಗಿ ಆಯ್ಕೆಯಾದ ಉದಯಶಂಕರ್ ಶೆಟ್ಟಿ ಅರಿಯಡ್ಕ ಮನೆ ಪುತ್ತೂರು ಮತ್ತು ಪ್ರಶಾಂತ್ ರೈ ಗೊಳಿತೊಟ್ಟು ಅವರಿಗೆ ಸ್ಥಾನ ಸಿಕ್ಕಿತ್ತು. ಮಾ.3ರ ಪರಿಷ್ಕೃತ ಆದೇಶದಲ್ಲಿ ಈ ಇಬ್ಬರನ್ನು ಕೈಬಿಟ್ಟು ಪ್ರಮೋದ್ ಶೆಟ್ಟಿ ಮತ್ತು ಪ್ರಶಾಂತ್ ಪೂಜಾರಿ ಅವರನ್ನು ಸೇರಿಸಲಾಗಿತ್ತು.ಇದನ್ನು ಪ್ರಶ್ನಿಸಿ ಅವರು ಕರ್ನಾಟಕ ಹೈಕೋರ್ಟ್ ನ ಮೊರೆ ಹೋಗಿ ಆಯ್ಕೆಯಾದ ಸಮಿತಿಯನ್ನು ರದ್ದುಗೊಳಿಸಿ ಹೊಸ ಸಮಿತಿಯನ್ನು ರಚಿಸಲು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ನಿರ್ದೇಶನ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೊಸ ಸಮಿತಿ ರಚಿಸಲಾಗಿದ್ದು.

ಈ ಹೊಸ ಆದೇಶದನ್ವಯ ಸಮಿತಿಗೆ ನೇಮಕಗೊಂಡ ಸದಸ್ಯರು ಈ ಕೆಳಗಿನವರಾಗಿದ್ದಾರೆ:
ಪರಿಶಿಷ್ಟ ಜಾತಿ ಸ್ಥಾನ: ಹರಿಶ್ಚಂದ್ರ ಉಪ್ಪರಪಳಿಕೆ ಕೊಕ್ಕಡ, ಮಹಿಳಾ ಸ್ಥಾನ: ಸಿನಿ ತಂಡಶೇರಿ ಕೊಕ್ಕಡ, ಲೋಕೇಶ್ವರಿ ವಿನಯಚಂದ್ರ ವಳಂಬ್ರ ಕಡಿರುದ್ಯಾವರ, ಸಾಮಾನ್ಯ ಸ್ಥಾನ: ಗಣೇಶ್ ಕಾಶಿ ಕಾಶಿಹೌಸ್ ಕೊಕ್ಕಡ, ಸುಬ್ರಹ್ಮಣ್ಯ ಶಬರಾಯ ವಿಶ್ವಂಬರ ಮನೆ ಕೊಕ್ಕಡ, ವಿಶ್ವನಾಥ ಕೆ. ಕೊಲ್ಲಾಜೆ ಕೊಕ್ಕಡ, ಪ್ರಮೋದ್ ಕುಮಾರ್ ಶೆಟ್ಟಿ ಎಂತಿಮರ್ ರೆಖ್ಯ, ಪ್ರಶಾಂತ್ ಕುಮಾರ್ ಶಾಂತಿಜೆ ಮನೆ ಕೊಕ್ರಾಡಿ, ಪ್ರಧಾನ ಅರ್ಚಕರ ಸ್ಥಾನ: ಸತ್ಯಪ್ರಿಯ ಕಲ್ಲೂರಾಯ ಅವರನ್ನು ನೇಮಿಸಲಾಗಿದೆ.

  •  

Leave a Reply

error: Content is protected !!