Dharmasthala: ಅನಧಿಕೃತ ಅಂಗಡಿಗಳ ವಿರುದ್ಧ ಕ್ರಮ: ಧರ್ಮಸ್ಥಳ-ಬೆಂಗಳೂರು ಹೆದ್ದಾರಿ ಬದಿಯ 19 ಅಂಗಡಿಗಳನ್ನು ಗ್ರಾ.ಪಂ.ಯಿಂದ ತೆರವು

ಶೇರ್ ಮಾಡಿ

ಕೊಕ್ಕಡ: ಧರ್ಮಸ್ಥಳದಿಂದ ಬೆಂಗಳೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ, ಕಲ್ಲೇರಿಯಿಂದ ಕುದ್ರಾಯ ಸೇತುವೆ ತನಕ ರಸ್ತೆ ಬದಿ ಹಾಗೂ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿತವಾಗಿದ್ದ 19 ಅಂಗಡಿಗಳನ್ನು ಧರ್ಮಸ್ಥಳ ಗ್ರಾಮ ಪಂಚಾಯಿತಿ ತೆರವುಗೊಳಿಸಿದೆ.

ಸಾರ್ವಜನಿಕರಿಂದ ಈ ಅಂಗಡಿಗಳ ವಿರುದ್ಧ ಅನೇಕ ದೂರುಗಳು ಬಂದಿದ್ದು, ರಸ್ತೆಯ ಬದಿಯಲ್ಲಿ ಈ ಅಂಗಡಿಗಳು ಹಕ್ಕು ಇಲ್ಲದೆ ಸ್ಥಳಾವಕಾಶ ಪಡೆದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಕೆಲ ಸಂದರ್ಭಗಳಲ್ಲಿ ಅಪಘಾತಗಳು ಸಂಭವಿಸಿ ಸಾವಿನ ಪ್ರಕರಣಗಳೂ ಸಂಭವಿಸಿವೆ ಎಂದು ವರದಿಯಾಗಿದೆ.

ಪಂಚಾಯಿತಿ ಈ ಅಂಗಡಿಗಳಿಗೆ ಧ್ವನಿ ವರ್ಧಕಗಳ ಮೂಲಕ ಹಲವು ಬಾರಿ ಸೂಚನೆ ನೀಡಿದರೂ ಕೂಡ ಅಂಗಡಿ ಮಾಲಿಕರು ತೆರವುಗೊಳಿಸದ ಹಿನ್ನೆಲೆಯಲ್ಲಿ, ಪಂಚಾಯಿತಿ ಆಡಳಿತ ಮಂಡಳಿಯ ಸಹಕಾರದಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ. ಅವರ ನೇತೃತ್ವದಲ್ಲಿ ಸಿಬ್ಬಂದಿ ವರ್ಗದ ಸಹಕಾರದಿಂದ ಈ ತೆರವು ಕಾರ್ಯಾಚರಣೆ ನಡೆಸಲಾಯಿತು.

ಈ ಸಂದರ್ಭ ಧರ್ಮಸ್ಥಳ ಠಾಣೆಯ ಪೊಲೀಸರು ಶಿಸ್ತು ಹಾಗೂ ಭದ್ರತೆಯ ನಿಟ್ಟಿನಲ್ಲಿ ಸಹಕರಿಸಿದರು. ಪಂಚಾಯಿತಿ ಈ ಕ್ರಮವನ್ನು ಸಾರ್ವಜನಿಕರ ಸುರಕ್ಷತೆ ಮತ್ತು ಹಾದಿ ಶುದ್ಧತೆಯ ದೃಷ್ಟಿಯಿಂದ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  •  

Leave a Reply

error: Content is protected !!