

ಕೊಕ್ಕಡ: ಧರ್ಮಸ್ಥಳದ ನಿಡ್ಲೆ ಎಂಬ ಪುಟ್ಟ ಗ್ರಾಮದಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ‘ಕರುಂಬಿತ್ತಿಲ್ ಶಿಬಿರ’ ನುಡಿಸಂಗೀತಾಸಕ್ತರಿಗೆ ವಿಭಿನ್ನ ಅನುಭವಗಳನ್ನು ನೀಡಲು ಸಜ್ಜಾಗಿದೆ. ಮೇ 20ರಿಂದ 25ರವರೆಗೆ ನಡೆಯಲಿರುವ ಈ ಶಿಬಿರವು ಕೇವಲ ಸಂಗೀತಾಭ್ಯಾಸವಲ್ಲದೆ, ಶ್ರೇಷ್ಠ ಕಲಾವಿದರೊಂದಿಗೆ ನೇರ ಸಂವಾದ, ವಿಶಿಷ್ಟ ಕಛೇರಿಗಳು, ನವೀನ ಚಟುವಟಿಕೆಗಳು ಮುಂತಾದ ವೈವಿಧ್ಯಮಯ ಸಂಗೀತ ಲೋಕವನ್ನು ರಚಿಸಲಿದೆ.
ಪುಟ್ಟ ಆರಂಭದಿಂದ ಮಹತ್ವದ ಮಟ್ಟಿಗೆ:
2000ನೇ ವರ್ಷದಲ್ಲಿ ಕರುಂಬಿತ್ತಿಲ್ ಕುಟುಂಬದ ಸದಸ್ಯರು – ಪಿಟೀಲು ವಿದ್ವಾಂಸರಾದ ಶ್ರೀ ವಿಠ್ಠಲ ರಾಮಮೂರ್ತಿ ಮತ್ತು ಅವರ ಕುಟುಂಬದವರೊಂದಿಗೆ ಆರಂಭವಾದ ಈ ಶಿಬಿರವು ಇಂದು 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನೊಳಗೊಂಡ ಪ್ರಮುಖ ಸಂಗೀತ ಶಿಬಿರವಾಗಿ ಬೆಳೆದಿದೆ. ದೇಶ–ವಿದೇಶಗಳಿಂದ ಕಲಾಸಕ್ತರು ಭಾಗವಹಿಸುವ ಈ ಶಿಬಿರವು, ಭಾಗವಹಿಸುವ ಪ್ರತಿಯೊಬ್ಬರನ್ನೂ ‘ಕರುಂಬಿತ್ತಿಲ್ ಕುಟುಂಬದ’ ಭಾಗವನ್ನಾಗಿ ಮಾಡುವ ವಿಶಿಷ್ಟ ಶಕ್ತಿ ಹೊಂದಿದೆ.
ವಿಶಿಷ್ಟ ಅತಿಥಿಗಳು, ದಿಗ್ಗಜ ಕಲಾವಿದರ ದರ್ಶನ:
ಹಿಂದಿನ ವರ್ಷಗಳಲ್ಲಿ ಶ್ರೀ ಲಾಲ್ಗುಡಿ ಜಿ ಜಯರಾಮನ್, ವಿದ್ವಾನ್ ಬಾಲಮುರಳಿಕೃಷ್ಣ, ಉಮಯಾಳಪುರಂ ಶಿವರಾಮನ್, ಟಿ.ವಿ. ಗೋಪಾಲಕೃಷ್ಣ, ಬಾಂಬೆ ಜಯಶ್ರೀ, ಟಿ.ಎಂ. ಕೃಷ್ಣ ಮುಂತಾದ ಜಾಗತಿಕ ಮಟ್ಟದ ಕಲಾವಿದರು ಈ ಶಿಬಿರಕ್ಕೆ ಭಾಗವಹಿಸಿ ಶಿಬಿರದ ಮಟ್ಟವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ಈ ವರ್ಷ ಭಾಗವಹಿಸುತ್ತಿರುವ ಪ್ರಮುಖ ಕಲಾವಿದರು:
ವಿದುಷಿ ಆರ್. ಎನ್. ಶ್ರೀಲತಾ,ವಿದ್ವಾನ್ ನೈವೇಲಿ ಆರ್. ಸಂತಾನಗೋಪಾಲನ್, ವಿದ್ವಾನ್ ಹೊಸಹಳ್ಳಿ ವೆಂಕಟ್ರಾಮ್, ವಿದ್ವಾನ್ ಪ್ರೊ. ವಿ.ವಿ. ಸುಬ್ರಹ್ಮಣ್ಯಂ,ವಿದ್ವಾನ್ ನಾಗೈ ಮುರಳೀಧರನ್, ವಿದ್ವಾನ್ ಶ್ರೀಮುಷ್ಣಮ್ ವಿ. ರಾಜಾರಾವ್, ವಿದ್ವಾನ್ ಮಾರುತಿ ಪ್ರಸಾದ್, ವಿದ್ವಾನ್ ಡಿ. ಶ್ರೀನಿವಾಸ್, ವಿದ್ವಾನ್ ವಿದ್ಯಾಭೂಷಣ
ಆಕರ್ಷಕ ಚಟುವಟಿಕೆಗಳು:
ವಿಶೇಷ ಸಂಗೀತ ಕಛೇರಿಗಳು, ಶ್ರೇಷ್ಠ ಕಲಾವಿದರೊಂದಿಗೆ ಸಂದರ್ಶನ, ಶಿಬಿರಾರ್ಥಿಗಳಿಗೆ ವಾದ್ಯ ಪ್ರದರ್ಶನದ ಅವಕಾಶ. ಸಂಗೀತ ಕ್ವಿಜ್, ಸಂಗೀತ ಪ್ರಾತ್ಯಕ್ಷಿಕೆ,ಯಕ್ಷಗಾನ ಪ್ರದರ್ಶನ
ಗೌರವಾತಿಥ್ಯದಿಂದ ಕಾರ್ಯಕ್ರಮದ ಮೆರುಗು:
ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿಯವರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಡಾ. ಎಂ. ಮೋಹನ್ ಆಳ್ವ, ಶ್ರೀ ಹರೀಶ್ ಪೂಂಜ, ಕ್ಲಿವ್ಲ್ಯಾಂಡ್ ಶ್ರೀ ವಿ.ವಿ. ಸುಂದರಂ ಮತ್ತು ಶ್ರೀ ವಿ.ವಿ. ರಮಣಮೂರ್ತಿ ಈ ಶಿಬಿರಕ್ಕೆ ಗೌರವಾತಿಥಿಗಳಾಗಿ ಆಗಮಿಸಲಿದ್ದಾರೆ.
ಸಂಗೀತೋತ್ಸವದ ಸಮಾರೋಪ:
ಮೇ 25ರಂದು ಹೆಸರಾಂತ ಸಂಗೀತ ವಿದ್ವಾಂಸರಾದ ಶ್ರೀ ವಿದ್ಯಾಭೂಷಣ ಅವರ ವಿಶೇಷ ಕಛೇರಿ ಈ ಶಿಬಿರದ ಸ್ಮರಣೀಯ ಅಂತ್ಯವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ:
ಕರುಂಬಿತ್ತಿಲ್ ಶಿಬಿರದ FaceBook ಪುಟವನ್ನು ಭೇಟಿ ನೀಡಿ













