

ನೆಲ್ಯಾಡಿ: ಕಡಬ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ), ಬಿ.ಸಿ. ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯದ ಕೌಕ್ರಾಡಿ ಕಾರ್ಯಕ್ಷೇತ್ರದ ಮಾಸಿಕ ಸಭೆ ಹೊಸಮಜಲು ಪ್ರಾಥಮಿಕ ಶಾಲೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸೇವಾ ಪ್ರತಿನಿಧಿ ನಮಿತಾ ಎಸ್. ಶೆಟ್ಟಿ ಉಪಸ್ಥಿತರಿದ್ದು, ತಂಡದ ಸದಸ್ಯರಿಗೆ ವಿವಿಧ ಮಾಹಿತಿ ನೀಡಿದರು. ಸಹಕಾರ ಸಂಘದ ಸದಸ್ಯರಾದ ಕೆ.ಪಿ. ಸುಗಂಧಿ ಅವರ ಮನೆ ಹಾಗೂ ಕೃಷಿಗೆ ಪ್ರಾಕೃತಿಕ ವಿಕೋಪದಿಂದ ಹಾನಿಯುಂಟಾದ ಹಿನ್ನೆಲೆಯಲ್ಲಿ, ಒಕ್ಕೂಟದ ವತಿಯಿಂದ ರೂಪಾಯಿ 5,000 ಮೊತ್ತದ ಸಹಾಯಧನವನ್ನು ಮಂಜೂರು ಮಾಡಲಾಯಿತು. ಈ ಮಂಜೂರಾತಿ ಪತ್ರವನ್ನು ಅಧ್ಯಕ್ಷ ಬಾಲಕೃಷ್ಣ ಗೌಡ ವಿತರಿಸಿದರು.
ಸಭೆಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ರಮೇಶ್ ಬಾಣಜಾಲು, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಭೆಯ ಜವಾಬ್ದಾರಿಯನ್ನು ಅನುಗ್ರಹ ತಂಡದ ಸದಸ್ಯರು ಹೊತ್ತಿದ್ದು, ಸದಸ್ಯರಾದ ಅಬ್ದುಲ್ ನಝೀರ್ ಸ್ವಾಗತಿಸಿದರು, ಸುಲೈಮಾನ್ ವಂದಿಸಿದರು.













