ಶಿಬಾಜೆ : ಹಳ್ಳದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಶೇರ್ ಮಾಡಿ

ಕೊಕ್ಕಡ: ಶಿಬಾಜೆ ಗ್ರಾಮದ ಬರ್ಗುಳದ ಶೀನ ಎಂಬವರ ಮನೆ ಸಮೀಪ ಹರಿಯುವ ಹಳ್ಳದಲ್ಲಿ ಮಂಗಳವಾರದಂದು ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಶಿಬಾಜೆ ಗ್ರಾಮದ ಪತ್ತಿಮಾರು ವೆಂಕಪ್ಪ ಪೂಜಾರಿ ಅವರ ಪುತ್ರ ಪ್ರಸಾದ್ ಪೂಜಾರಿ(36) ಎಂದು ಗುರುತಿಸಲಾಗಿದೆ.

ಘಟನೆಯ ಮಾಹಿತಿಯೊಡನೆ ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಮೇಲಕ್ಕೆತ್ತುವಲ್ಲಿ ಸಹಕಾರ ನೀಡಿತು. ಸ್ಥಳಕ್ಕೆ ಧರ್ಮಸ್ಥಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಗಿದೆ.

ಮೃತ ವ್ಯಕ್ತಿಗೆ ತಂದೆ, ತಾಯಿ, ತಮ್ಮ ಹಾಗೂ ಮೂರು ಸಹೋದರಿಯರು ಇದ್ದಾರೆ.

  •  

Leave a Reply

error: Content is protected !!