ಶಿಶಿಲ ಬಸ್ಸಿನಲ್ಲಿ ಕಾಣಿಸಿಕೊಂಡ ಹೊಗೆ …!; ನೆಲ್ಯಾಡಿಯಲ್ಲಿ ಪ್ರಯಾಣಿಕರ ಪರದಾಟ

ಶೇರ್ ಮಾಡಿ

ನೆಲ್ಯಾಡಿ : ಶಿಶಿಲದಿಂದ ಅರಸಿನಮಕ್ಕಿ, ನೆಲ್ಯಾಡಿ ಮೂಲಕ ಉಪ್ಪಿನಂಗಡಿಗೆ ಬರುವ ಕೆಎಸ್ ಆರ್ ಟಿಸಿ ಬಸ್ ನೆಲ್ಯಾಡಿ ತಲುಪುತ್ತಿದ್ದಂತೆ ಬಸ್ಸಿನೊಳಗೆ ಹೊಗೆ ಕಾಣಿಸಿಕೊಂಡು ಪ್ರಯಾಣಿಕರು ಭಯಭೀತರಾದ ಘಟನೆ ಮೇ.24 ರಂದು ಬೆಳಿಗ್ಗೆ ನಡೆದಿದೆ.

ಬೆಳಿಗ್ಗೆ ಶಿಶಿಲದಿಂದ 7 ಗಂಟೆಗೆ ಹೊರಡುವ ಈ ಬಸ್ಸಿನಲ್ಲಿ ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವವರು ದಿನ ನಿತ್ಯ ಪ್ರಯಾಣಿಸುತ್ತಾರೆ. ಬಸ್ಸಿನಲ್ಲಿ ಜನ ತುಂಬಿ ತುಳುಕುತ್ತಾರೆ. ಇಂದು (ಮೇ 24) ಸಹ ಬಸ್ಸಿನಲ್ಲಿ ಸಾಕಷ್ಟು ಜನ ಪ್ರಯಾಣಿಸುತ್ತಿದ್ದರು. ಬಸ್ ನೆಲ್ಯಾಡಿ ತಲುಪುತ್ತಿದ್ದಂತೆ ಬಸ್ಸಿನೊಳಗೆ ಹೊಗೆ ಕಾಣಿಸಿಕೊಂಡಿದ್ದು ಪ್ರಯಾಣಿಕರು ಭಯ ಭೀತರಾಗಿ ಕೆಳಗೆ ಇಳಿದಿದ್ದಾರೆ. ಈ ಮಾರ್ಗದಲ್ಲಿ ಈ ವೇಳೆ ಬೇರೆ ಬಸ್ಸುಗಳ ಓಡಾಟವೂ ಇಲ್ಲದೇ ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾದರು. ಜೀಪು ಸೇರಿದಂತೆ ಇತರೆ ವಾಹನಗಳಲ್ಲಿ ಪ್ರಯಾಣಿಕರು ಕಷ್ಟ ಪಟ್ಟು ಪ್ರಯಾಣಿಸಿದರು. ಬಳಿಕ ಬಸ್ಸನ್ನು ಚಾಲಕ ಡಿಪೋ ಗೆ ಕೊಂಡೊಯ್ದಿರುವುದಾಗಿ ವರದಿಯಾಗಿದೆ.

  •  

Leave a Reply

error: Content is protected !!