ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ಟ್ರಸ್ಟಿ ಗಳಿಗೆ ಸನ್ಮಾನ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ 2024-25ನೇ ಸಾಲಿನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಧಾರ್ಮಿಕ ಟ್ರಸ್ಟಿ ಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಚರ್ಚ್‌ನ ಟ್ರಸ್ಟಿಗಳಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ ನಿವೃತ್ತ ಸೈನಿಕರಾದ ಅಲೆಕ್ಸಾಂಡರ್ ಚೆಪ್ಪಿತನಾಮ್, ಜೋಬಿನ್ ಪರಪರಾಗತ್, ಅಲ್ಬಿನ್ ಕೈದಮಟ್ಟತ್ತಿಲ್ ಮತ್ತು ಶಿಬು ಪನಚಿಕ್ಕಲ್ ಇವರನ್ನು ವಿಶೇಷವಾಗಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಧರ್ಮಗುರು ವಂ.ಶಾಜಿ ಮಾತ್ಯು ಅವರು ಅಧ್ಯಕ್ಷತೆ ವಹಿಸಿ, ಸನ್ಮಾನಿತರಿಗೆ ಅಭಿನಂದನೆ ಸಲ್ಲಿಸಿದರು. “ಇವರ ನಿಸ್ವಾರ್ಥ ಸೇವೆಯು ಇತರರಿಗೂ ಪ್ರೇರಣೆಯಾಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದು ಕೇವಲ ಹೊಣೆಗಾರಿಕೆಯಲ್ಲ, ಅದು ಒಬ್ಬರ ನಿಷ್ಠೆಯ ಪ್ರದರ್ಶನವಾಗಿದೆ,” ಎಂದು ಅವರು ಶ್ಲಾಘಿಸಿದರು.

ಸ್ಥಳೀಯ ಸಮುದಾಯದ ಹಲವಾರು ಗಣ್ಯರು ಹಾಗೂ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು.

  •  

Leave a Reply

error: Content is protected !!