

ನೆಲ್ಯಾಡಿ: ನೆಲ್ಯಾಡಿಯಲ್ಲೊಂದು ಹೊಸ ಆರೋಗ್ಯ ಸೇವಾ ಕೇಂದ್ರವಾಗಿ “ಶಾರದಾ ಕ್ಲಿನಿಕ್” ಎಂಬ ವೈದ್ಯಕೀಯ ಚಿಕಿತ್ಸಾಲಯ ಪ್ರಾರಂಭಗೊಂಡಿದ್ದು, ಸ್ಥಳೀಯ ಜನತೆಗೆ ಮತ್ತೊಂದು ಗುಣಮಟ್ಟದ ಚಿಕಿತ್ಸೆ ನೀಡುವ ಕೇಂದ್ರವಾಗಿ ಪರಿಗಣಿಸಲಾಗಿದೆ. ಈ ಕ್ಲಿನಿಕ್‌ನ್ನು ಯುವ ವೈದ್ಯರಾದ ಡಾ. ಪ್ರಜ್ವಲ್ ರವರು ಆರಂಭಿಸಿದ್ದಾರೆ.
ದುರ್ಗಾಶ್ರೀ ಟವರಿನ ನೆಲ ಮಹಡಿಯಲ್ಲಿರುವ ಈ ಕ್ಲಿನಿಕ್ ಅನ್ನು ಜೂ.2 ರಂದು ಅದ್ದೂರಿಯಾಗಿ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ, ದೀಪ ಬೆಳಗಿಸುವ ಮೂಲಕ ಸುಬ್ರಾಯ ಬೈಪಾಡಿತಾಯ, ಸುಜಾತ ಬೈಪಾಡಿತಾಯ, ಜನಾರ್ಧನ ತೋಳ್ಪಾಡಿತ್ತಾ, ಲಲಿತಾ ಕೆ ಹಾಗೂ ಪ್ರಖ್ಯಾತ್ ರವರು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದವರು.
ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಸೇವಾ ಮನೋಭಾವನೆ, ನಿಷ್ಠೆ ಮತ್ತು ಜವಾಬ್ದಾರಿಯಿಂದ ಜನರ ನಂಬಿಕೆ ಗಳಿಸಿರುವ ಡಾ. ಪ್ರಜ್ವಲ್, ಶಾರದಾ ಕ್ಲಿನಿಕ್ ಮೂಲಕ ಗ್ರಾಮೀಣ ಭಾಗದ ಜನರ ಆರೋಗ್ಯ ಸಂರಕ್ಷಣೆಗಾಗಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಸೇವಾ ಮನೋಭಾವನೆ, ನಿಷ್ಠೆ ಮತ್ತು ಜವಾಬ್ದಾರಿಯಿಂದ ಜನರ ನಂಬಿಕೆ ಗಳಿಸಿರುವ ಡಾ. ಪ್ರಜ್ವಲ್, ಶಾರದಾ ಕ್ಲಿನಿಕ್ ಮೂಲಕ ಗ್ರಾಮೀಣ ಭಾಗದ ಜನರ ಆರೋಗ್ಯ ಸಂರಕ್ಷಣೆಗಾಗಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಈ ಸಮಾರಂಭಕ್ಕೆ ಅನೇಕ ಗಣ್ಯರು ಮತ್ತು ವೈದ್ಯಕೀಯ ಕ್ಷೇತ್ರದ ಪ್ರಮುಖರು ಆಗಮಿಸಿ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. ಸೀತಾರಾಮ ತೋಳ್ಪಾಡಿತಾಯ, ಸತೀಶ ದುರ್ಗಾಶ್ರೀ, ನಿವೃತ್ತ ಮುಖ್ಯಗುರು ರವೀಂದ್ರ ಟಿ, ಡಾ. ಬಾಲಸುಬ್ರಮಣ್ಯ, ಡಾ. ಮುರಳೀಧರ್, ಡಾ.ಸುಧಾ, ಡಾ. ಶಮಂತ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡಾ.ಪ್ರಜ್ವಲ್ ಈ ಮೊದಲು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಅವರು ಅನುಭವವನ್ನು ಸಂಪಾದಿಸಿಕೊಂಡು, ಇದೀಗ ಸ್ವಂತ ಕ್ಲಿನಿಕ್ ಆರಂಭಿಸಿ ಸಾರ್ವಜನಿಕರ ಸೇವೆಗೆ ಮುಂದೆ ಬಂದಿದ್ದಾರೆ.
ಕ್ಲಿನಿಕ್ ಸಮಯ:
ವಾರದಲ್ಲಿ ಶನಿವಾರವನ್ನು ಹೊರತುಪಡಿಸಿ, ಪ್ರತಿದಿನ ಮಧ್ಯಾಹ್ನ 4 ರಿಂದ ರಾತ್ರಿ 8 ಗಂಟೆಯವರೆಗೆ ರೋಗಿಗಳಿಗೆ ಲಭ್ಯವಿರುತ್ತಾರೆ.













