ನೆಲ್ಯಾಡಿ: ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ

ಶೇರ್ ಮಾಡಿ

ನೆಲ್ಯಾಡಿ: ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜಾ ಸಮಿತಿಯ ರಚನೆ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಗುರುಪ್ರಸಾದ್ ಅವರ ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು.

ದೇವಸ್ಥಾನದ ಆಡಳಿತ ಮುಕ್ತೇಸರ ಡಾ.ಸುಬ್ರಹ್ಮಣ್ಯ ಶಬರಾಯ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ಕೆ.ಎಸ್, ಕಾರ್ಯದರ್ಶಿ ಕಾಂತಪ್ಪ ಗೌಡ ಪೂವಾಜೆ, ಗೆಳೆಯರ ಬಳಗದ ಅಧ್ಯಕ್ಷ ಸಂಪತ್ ಶೆಟ್ಟಿ, ಭಜನಾ ಮಂಡಳಿಯ ಚಂದ್ರಶೇಖರ್ ಶೆಟ್ಟಿ, ಶಿವಪ್ರಸಾದ್ ಬೀದಿಮಜಲು ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.

ಸಭೆಯಲ್ಲಿ ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು, ಅಧ್ಯಕ್ಷರಾಗಿ ಸಂಧ್ಯಾ ಸುರೇಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಸೌಮ್ಯ ಅಶೋಕ್ ಶೆಟ್ಟಿ, ಕಾರ್ಯದರ್ಶಿಯಾಗಿ ಸುಮಿತ್ರ ಹಾಗೂ ಕೋಶಾಧಿಕಾರಿಯಾಗಿ ಸುಲತಾ ಬಿ ಮೋಹನ ಚಂದ್ರ ಅವರನ್ನು ಆಯ್ಕೆ ಮಾಡಲಾಯಿತು.

ಸತೀಶ್ ಕೆ.ಎ ಸ್ವಾಗತಿಸಿದರು, ಸುಲತ ಬಿ ವಂದಿಸಿದರು.

  •  

Leave a Reply

error: Content is protected !!