


ನೆಲ್ಯಾಡಿ: ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆಯು ಭಾನುವಾರದಂದು ದೇವಸ್ಥಾನದ ಆಡಳಿತ ಮುಕ್ತೇಸರ ಡಾ.ಸುಬ್ರಹ್ಮಣ್ಯ ಶಬರಾಯ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ಕೆ.ಎಸ್ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗುರುಪ್ರಸಾದ್, ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಕಾಂತಪ್ಪ ಗೌಡ ಪೂವಾಜೆ, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಸಂಧ್ಯಾ ಸುರೇಶ್ ಶೆಟ್ಟಿ, ಉಪಾಧ್ಯಕ್ಷೆ ಸೌಮ್ಯ ಅಶೋಕ್ ಶೆಟ್ಟಿ, ಕಾರ್ಯದರ್ಶಿಯಾಗಿ ಸುಮಿತ್ರ, ಕೋಶಾಧಿಕಾರಿಯಾಗಿ ಸುಲತಾ ಬಿ ಮೋಹನ ಚಂದ್ರ ಗೆಳೆಯರ ಬಳಗದ ಅಧ್ಯಕ್ಷ ಸಂಪತ್ ಶೆಟ್ಟಿ, ಭಜನಾ ಮಂಡಳಿಯ ಚಂದ್ರಶೇಖರ್ ಶೆಟ್ಟಿ, ಶಿವಪ್ರಸಾದ್ ಬೀದಿಮಜಲು, ಚಂದ್ರಶೇಖರ ಶೆಟ್ಟಿ, ರಮೇಶ್ ಶೆಟ್ಟಿ ಬೀದಿ, ಗಿರೀಶ್ ಶೆಟ್ಟಿ ಬೀದಿ, ಸುಂದರ ರೈ ಆಮ್ಮುಂಜೆ, ಸಂದೇಶ್ ಶೆಟ್ಟಿ ಆಮ್ಮುಂಜೆ, ಬಾಲಕೃಷ್ಣ, ಆನಂದ ಆಚಾರಿ, ಇಂದಿರಾ, ವಿಮಲ, ಜಯಂತಿ, ವಾರಿಜ, ಮೊದಲಾದವರು ಉಪಸ್ಥಿತರಿದರು.









