

ಕಳೆಂಜ: ಧರ್ಮಸ್ಥಳ–ಕಾರ್ಯಾತಡ್ಕ–ಶಿಶಿಲ ಹಾಗೂ ಕಾರ್ಯಾತಡ್ಕ–ಶಿಬರಾಜೆ ಪಾದೆ–ಮುದ್ದಿಗೆ–ಕೊಕ್ಕಡ–ಉಪ್ಪಿನಂಗಡಿ–ಪುತ್ತೂರು ಮಾರ್ಗದ ಹೊಸ ಬಸ್ ಸೇವೆ ಆರಂಭಿಸಬೇಕೆಂದು ಕಳೆಂಜ ಕಾಂಗ್ರೆಸ್ ಗ್ರಾಮ ಸಮಿತಿಯ ವತಿಯಿಂದ ಜು.11ರಂದು ಧರ್ಮಸ್ಥಳ ಡಿಪ್ಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಲಾಯಿತು.
ಈ ಭಾಗದಲ್ಲಿ 8000ಕ್ಕೂ ಹೆಚ್ಚಿನ ಜನಸಂಖ್ಯೆ ವಾಸವಿದ್ದು, ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಉಪ್ಪಿನಂಗಡಿ ಹಾಗೂ ನೆಲ್ಯಾಡಿ ಭಾಗಗಳಿಗೆ ನಿತ್ಯ ಪ್ರಯಾಣಿಸುತ್ತಿದ್ದಾರೆ. ಆದರೆ ಸಂಚಾರ ವ್ಯವಸ್ಥೆಯ ಕೊರತೆಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಶೀಘ್ರವಾಗಿ ಹೊಸ ಬಸ್ ಸೇವೆ ಪ್ರಾರಂಭಿಸಬೇಕೆಂದು ಬೆಳ್ತಂಗಡಿ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪಿ.ಟಿ. ಸೆಬಾಸ್ಟಿನ್ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತ ಕ್ರಮ ಕೈಗೊಳ್ಳಬೇಕೆಂದು ಡಿಪ್ಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದರು.
ಗ್ರಾ.ಪಂ. ಸದಸ್ಯರಾದ ನಿತ್ಯಾನಂದ ರೈ, ಪ್ರೇಮ್ ಬಿ.ಎಸ್., ಊರ ಪ್ರಮುಖರಾದ ಶ್ರೀಧರ್ ರಾವ್, ಶರತ್ ಮೂಡಾರು, ಅಶೋಕ್ ಭಟ್ ಕಾಯಡ, ಜಯವರ್ಮ ಜೈನ್ ಶಿಬರಾಜೆ ಹಾಗೂ ಕೇಶವ ಗೌಡ ಮಲ್ಲಜಾಲು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










