

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ), ಕಡಬ ತಾಲೂಕಿನ ಇಚಿಲಂಪಾಡಿ ಕಾರ್ಯಕ್ಷೇತ್ರದ ಕೊರಮೇರು ಗ್ರಾಮದ ನಾಗಶ್ರೀ ಮಹಿಳಾ ಸಂಘದ ಸದಸ್ಯರ ಕುಟುಂಬದ ಅಂಗವಿಕಲ ಸದಸ್ಯರಿಗೆ ವೀಲ್ ಚೇರ್ ವಿತರಣೆ ಮಾಡಲಾಯಿತು.
ವಿತರಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ, ಒಕ್ಕೂಟದ ಅಧ್ಯಕ್ಷ ಚೆನ್ನಪ್ಪ ಗೌಡ, ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಒಕ್ಕೂಟದ ಉಪಾಧ್ಯಕ್ಷ ತನಿಯಪ್ಪರವರು ವಿತರಣೆ ಮಾಡಿದರು. ಸಂಘದ ಪದಾಧಿಕಾರಿ ಅಮಿತಾ, ವಲಯ ಮೇಲ್ವಿಚಾರಕ ಆನಂದ ಡಿ.ಬಿ, ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ, ಜೆ.ವಿ.ಕೆ. ಸಮನ್ವಯಾಧಿಕಾರಿ ಚೇತನಾ, ಹಾಗೂ ಕಾರ್ಯಕ್ಷೇತ್ರ ಸೇವಾಪ್ರತಿ ಶ್ರೀಮತಿ ವೇದಾ ಉಪಸ್ಥಿತರಿದ್ದರು.










