

ಕೊಕ್ಕಡ: ಅರಸಿನಮಕ್ಕಿ ಸಮೀಪದ ಉಡ್ಯೆರೆ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬನ ಮೇಲೆ ಕಾಡು ಹಂದಿಯೊಂದು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಶನಿವಾರದಂದು ಸಂಜೆ ನಡೆದಿದೆ.
ಪದ್ಮಯ್ಯ ಗೌಡ ಎಂಬವರ ತೋಟದಲ್ಲಿ ಗೊಬ್ಬರ ಹಾಕುತ್ತಿದ್ದ ರೆಖ್ಯ ಬೂಡು ನಿವಾಸಿ ಬಾಲಕೃಷ್ಣ ಎಂಬವರು ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಕಾಡು ಹಂದಿಯ ಹಠಾತ್ ದಾಳಿಗೆ ಸಿಲುಕಿದ್ದು, ಅವರ ಸೊಂಟ, ಕೈ ಮತ್ತು ಕಾಲಿನ ಭಾಗಗಳಲ್ಲಿ ಗಾಯಗಳಾಗಿವೆ.
ಅವರನ್ನು ಸ್ಥಳೀಯರು ತಕ್ಷಣವೇ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ತಿಳಿದು ಸಮಾಜ ಸೇವಕ ಹಾಗೂ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಉಪ್ಪಿನಂಗಡಿ ವಲಯದ ಪ್ರೊಬೆಷನರಿ ಎಸಿಎಫ್ ಹಸ್ತ ಶೆಟ್ಟಿ, ಅರಣ್ಯಾಧಿಕಾರಿ ರಾಘವೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಬಾಲಕೃಷ್ಣರಿಗೆ ಧೈರ್ಯ ತುಂಬಿದರು.










