
ಇಚ್ಲಂಪಾಡಿ: ಇಚ್ಲಂಪಾಡಿ ಗ್ರಾಮದಲ್ಲಿ ಭಾರೀ ಗಾಳಿ ಮಳೆಗೆ ಮರ ಬಿದ್ದು ಮನೆಗೆ ಗಂಭೀರ ಹಾನಿಯಾಗಿರುವ ಘಟನೆ ನಡೆದಿದೆ.

ಕೌಕ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಕುರಿಯಾಕೋಸ್ ಅಲಿಯಾಸ್ ರೋಯಿ ಅವರ ಸಹೋದರರಾದ ಅಬ್ರಹಾಂ ಟಿ.ಎಂ. ಅವರ ಇಚ್ಲಂಪಾಡಿಯ ಕಲ್ಲರ್ಬ ಮನೆಗೆ ಜುಲೈ 25ರಂದು ಸಂಜೆ ಮರ ಬಿದ್ದ ಪರಿಣಾಮ, ಮನೆಯ ಮೇಲ್ಛಾವಣಿಗೆ ಹಾಕಲಾಗಿದ್ದ ಸುಮಾರು 35 ಸಿಮೆಂಟ್ ಶೀಟ್‌ಗಳು ಸಂಪೂರ್ಣ ಹಾನಿಗೊಂಡಿವೆ, ಜೊತೆಗೆ ಮನೆಯ ಗೋಡೆಗೂ ಬಿರುಕು ಬಿದ್ದಿದೆ.
ಘಟನೆ ಸಂಭವಿಸುವ ವೇಳೆ ಮನೆಯೊಳಗಿದ್ದವರು ಅಪಾಯದಿಂದ ಪಾರಾಗಿದ್ದಾರೆ ವಿಷಯ ತಿಳಿದ ತಕ್ಷಣ ಕೌಕ್ರಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದೇವಿಕಾ ಮತ್ತು ಗ್ರಾಮ ಆಡಳಿತಾಧಿಕಾರಿ ಸಿದ್ದಲಿಂಗ ಜಂಗಮಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ನಷ್ಟ ಪರಿಶೀಲನೆ ನಡೆಸಿದರು.
ಇಚ್ಲಂಪಾಡಿಯ ಕ್ರಿಶ್ಚಿಯನ್ ಬ್ರದರ್ಸ್ ಟ್ರಸ್ಟ್ ಹಾಗೂ ಸ್ಥಳೀಯರ ಸಹಕಾರದಿಂದ ಶೀಘ್ರದಲ್ಲೇ ಮನೆಯ ಮೇಲ್ಛಾವಣಿಗೆ ಶೀಟ್ ಅಳವಡಿಸಿ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದಾರೆ.











