ಕೊಕ್ಕಡ: ಬರ್ಗುಳದಲ್ಲಿ ಬೃಹತ್ ಮರ ಬಿದ್ದು ವಿದ್ಯುತ್ ವ್ಯತ್ಯಯ – ಶೌರ್ಯ ಘಟಕದ ತುರ್ತು ಸ್ಪಂದನೆ

ಶೇರ್ ಮಾಡಿ

ಕೊಕ್ಕಡ: ಶಿಶಿಲ–ಶಿಬಾಜೆ ಗ್ರಾಮಗಳ ಗಡಿಪ್ರದೇಶವಾದ ಬರ್ಗುಳದಲ್ಲಿ ಮಂಗಳವಾರದಂದು ಬೆಳಿಗ್ಗೆ ಬೃಹತ್ ಗಾತ್ರದ ಮರವೊಂದು ಏಕಾಏಕಿಯಾಗಿ ಹೆಚ್‌.ಟಿ. ಲೈನ್‌ ಮೇಲೆ ಬಿದ್ದು, ಸುಮಾರು ಎರಡು ವಿದ್ಯುತ್ ಕಂಬಗಳು ಧರಾಶಾಯಿಯಾದವು. ಇದರಿಂದ ರಸ್ತೆ ಸಂಚಾರ ಹಾಗೂ ವಿದ್ಯುತ್‌ ಪೂರೈಕೆ ಸಂಪೂರ್ಣ ಅಸ್ತವ್ಯಸ್ತವಾಯಿತು.

ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್‌ ಮನವಿಗೆ ಸ್ಪಂದಿಸಿದ ಅರಸಿನಮಕ್ಕಿ,ಶಿಶಿಲ ಶೌರ್ಯ ಘಟಕದ ತುರ್ತು ಸ್ಪಂದನೆ ಸೇವಾ ತಂಡ ಸ್ಥಳಕ್ಕಾಗಮಿಸಿ, ಸ್ವಯಂಸೇವಕರಾದ ಅವಿನಾಶ್‌ ಭಿಡೆ, ಶೀನಪ್ಪ ನಾಯ್ಕ್‌, ರಾಧಾಕೃಷ್ಣ ಗುತ್ತು, ರಮೇಶ ಬೈರಕಟ್ಟ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡರು.

ಗ್ರಾಮ ಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕ್ಷರು, ಅರಣ್ಯ ರಕ್ಷಕರು ಹಾಗೂ ಪವರ್‌ಮ್ಯಾನ್‌ಗಳ ಸಮ್ಮುಖದಲ್ಲಿ ಗ್ರಾಮಸ್ಥರ ಸಹಕಾರದಿಂದ ಮರವನ್ನು ಸಂಪೂರ್ಣ ತೆರವುಗೊಳಿಸಿ ರಸ್ತೆ ಸಂಚಾರ ಹಾಗೂ ವಿದ್ಯುತ್ ದುರಸ್ತಿ ಕಾರ್ಯಕ್ಕೆ ಅನುಕೂಲ ಮಾಡಿಕೊ ಡಲಾಯಿತು.

  •  

Leave a Reply

error: Content is protected !!