
ಕೊಕ್ಕಡ : ಹಿಂದು ಜಾಗರಣ ವೇದಿಕೆ ಶಿವಾಜಿ ಗ್ರೂಪ್ ಆಫ್ ಬಾಯ್ಸ್, ಕೊಕ್ಕಡ ಘಟಕದ ವತಿಯಿಂದ ಆಗಸ್ಟ್ 14, ಗುರುವಾರ ಸಂಜೆ 7 ಗಂಟೆಗೆ ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆ ಹಾಗೂ ದಿಕ್ಸೂಚಿ ಭಾಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ರಾಮ ಸೇವಾ ಮಂದಿರ, ಕೊಕ್ಕಡದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಾರ್ಯತಡ್ಕದ ಗಂಗಾಧರ ಭಂಡಾರಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
1947ರ ಆಗಸ್ಟ್ 14ರ ಮಧ್ಯರಾತ್ರಿ ನಡೆದ ದೇಶ ವಿಭಜನೆಯ ಘೋರ ದುರಂತವನ್ನು ಸ್ಮರಿಸುತ್ತಾ, ಕಳೆದುಹೋದ ಭಾರತೀಯ ಭಾಗಗಳನ್ನು ಪುನಃ ಒಂದಾಗಿಸುವ ಮಹಾ ಸಂಕಲ್ಪವನ್ನು ಸಾರಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲೇ ಅನೇಕ ಭಾಗಗಳನ್ನು ಕಳೆದುಕೊಂಡ ಭಾರತ, ವಿಭಜನೆಯಿಂದ ತ್ರಿಖಂಡವಾಗಿದ್ದ ದುರಂತದ ಇತಿಹಾಸವನ್ನು ಜನತೆಗೆ ತಲುಪಿಸುವ ಉದ್ದೇಶ ಹೊಂದಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹಿಂದು ಬಂಧು-ಭಗಿನಿಯರಿಗೆ ಸಂಘಟಕರು ವಿನಂತಿಸಿದ್ದಾರೆ.












