ಪುದುವೆಟ್ಟಿನಲ್ಲಿ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸವರ್ಗ – ಸಂಘಟನೆ ಬಲವರ್ಧನೆಗೆ ಒತ್ತು

ಶೇರ್ ಮಾಡಿ

ಕೊಕ್ಕಡ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಪುದುವೆಟ್ಟು ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸವರ್ಗ ಸಭೆ ನಡೆಯಿತು.

ಹಿರಿಯ ಕಾರ್ಯಕರ್ತರಾದ ದಿವಾಕರ ಗೌಡ ಮುಚ್ಚಾರು, ಪುಟ್ಟ ಗೌಡ ಬರಮೇಲು, ನಾರಾಯಣ ಪೂಜಾರಿ ಕಾಯರಂಡ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಭೆಯ ಉದ್ಘಾಟನ ಭಾಷಣವನ್ನು ಮಂಡಲ ಉಪಾಧ್ಯಕ್ಷರು ಹಾಗೂ ಅಭ್ಯಾಸವರ್ಗ ಸಂಚಾಲಕರಾದ ಕೊರಗಪ್ಪ ಗೌಡ ಚಾರ್ಮಾಡಿ ನೆರವೇರಿಸಿದರು.

ಶಾಸಕರಾದ ಹರೀಶ್ ಪೂಂಜರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆ ಕುರಿತಂತೆ ವಿಸ್ತೃತವಾಗಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲು, ರಾಜೇಶ್ ಪೆರ್ಮುಡ, ಮಂಡಲ ಉಪಾಧ್ಯಕ್ಷ ಮೋಹನ್ ಅಂಡಿಂಜೆ, ಉಜಿರೆ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ನಿರಂಜನ್ ಶೆಟ್ಟಿ ಬೈಠಕ್ ನೀಡಿದರು.

ಉಜಿರೆ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಯಶವಂತ ಗೌಡ ಡೆಚ್ಚಾರು, ನಾರಾವಿ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅಭಿಜಿತ್ ಜೈನ್, ಪುದುವೆಟ್ಟು ಪಂಚಾಯತ್ ಅಧ್ಯಕ್ಷರು, ಶಕ್ತಿ ಕೇಂದ್ರ ಪ್ರಮುಖ ಪೂರ್ಣಾಕ್ಷ, ಹಿರಿಯರಾದ ಶ್ರೀಧರ್ ನಾಯರ್, ಸಂಜೀವ ಗೌಡ ಅರಸೋಲಿಗೆ, ಅಣ್ಣು ಗೌಡ ಕೊಡಪೊಟ್ಯ, ಬೂತ್ ಅಧ್ಯಕ್ಷರು ನಿತ್ಯಾನಂದ ಗೌಡ, ಸೋಯ್ ವರ್ಗೀಸ್ , ಚಂದ್ರಹಾಸ, ಬೂತ್ ಕಾರ್ಯದರ್ಶಿಗಳು ಗುರುಪ್ರಸಾದ್ ಕೋಟ್ಯಾನ್, ಆನಂದ ಕಲ್ಲಾಜೆ, ಜನಪ್ರತಿನಿಧಿಗಳು ಹಾಗೂ ವಿವಿಧ ಜವಾಬ್ದಾರಿಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ದಾಮೋದರ ಮುಜರ್ ದಡ್ದ್ ಹಾಗೂ ಭಾಸ್ಕರ ಪೂಜಾರಿ ಅಡ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು.

  •  

Leave a Reply

error: Content is protected !!