

ಅರಸಿನಮಕ್ಕಿ: ಧರ್ಮಸ್ಥಳ ಕ್ಷೇತ್ರದ ಸಂರಕ್ಷಣೆಯ ಬಗ್ಗೆ ಪೊಸ್ಟರ್ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಅರಸಿನಮಕ್ಕಿಯಲ್ಲಿ ಆಗಸ್ಟ್ 25ರಂದು ಬೆಳಗ್ಗೆ ನಡೆದಿದೆ.
ಕೊಕ್ಕಡ ಗ್ರಾಮದ ಕೋರಿಗದ್ದೆ ನಿವಾಸಿ ರಜತ್ ಭಂಡಾರಿ (25) ಎಂಬ ಯುವಕನ ಮೇಲೆ ಹಲ್ಲೆ ನಡೆದಿದ್ದು, ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿಯ ಪ್ರಕಾರ, ಅರಸಿನಮಕ್ಕಿಯಲ್ಲಿರುವ ಪ್ರಜ್ಞಾ ಹೇರ್ ಡ್ರೇಸ್ಸಸ್ ಸೆಲೂನ್ ನಲ್ಲಿ ಕೆಲಸ ಮಾಡುತ್ತಿದ್ದ ರಜತ್ ಭಂಡಾರಿ ಮೇಲೆ, ಕಾರಿನಲ್ಲಿ ಬಂದ ಕಿರಣ್ ಶಿಶಿಲ ಎಂಬಾತ ಆಗಸ್ಟ್ 25ರಂದು ಬೆಳಗ್ಗೆ 9.52ಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಹಲ್ಲೆಗೊಳಗಾದ ಯುವಕ, ಪ್ರಸ್ತುತ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೊಳಗಾದ ರಜತ್ ಭಂಡಾರಿ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಆರೋಪಿಯು ಕೊಲೆ ಬೆದರಿಕೆ ಹಾಕಿದ್ದಾನೆ ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಆರೋಪಿ ಕಿರಣ್ ಶಿಶಿಲ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











