

ಕೊಕ್ಕಡ: ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.), ಅರಸಿನಮಕ್ಕಿ ಇದರ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಮತ್ತು ಲೇಡಿಗೋಶನ್ ಆಸ್ಪತ್ರೆಯ ಸಹಯೋಗದಲ್ಲಿ, ಸೇವಾಭಾರತಿ ಕನ್ಯಾಡಿಯ ಆರೋಗ್ಯಂ ಯೋಜನೆಯಡಿ 102ನೇ ಬೃಹತ್ ರಕ್ತದಾನ ಶಿಬಿರವು ಹತ್ಯಡ್ಕ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಶ್ರೀ ಗುಡ್ರಾಮಲೇಶ್ವರ ದೇವಸ್ಥಾನ ಗುಡ್ರಾಧಿ ಅಧ್ಯಕ್ಷ ಮಂಜುನಾಥ ಗೌಡ ಕೈಕುರೆ ಉದ್ಘಾಟಿಸಿದರು. ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಬರ್ಗುಳ ಅಧ್ಯಕ್ಷತೆ ವಹಿಸಿ ಮಾತನಾಡಿ ರಕ್ತದಾನ ನಮ್ಮ ಆರೋಗ್ಯ ಕಾಪಾಡುವ ಮಹತ್ವದ ಕಾರ್ಯವಾಗಿದ್ದು, ಈ ಭಾಗದ ಜನರಿಗೆ ತುರ್ತು ರಕ್ತದ ಅವಶ್ಯಕತೆಯ ಸಂದರ್ಭಗಳಲ್ಲಿ ಸಹಾಯವಾಗುವಂತೆ ಹೆಲ್ಪ್‌ಲೈನ್ ನಂಬರ್ ನೀಡಲಾಗುವುದು ಎಂದರು.
ವೇದಿಕೆಯಲ್ಲಿ ಸೇವಾಧಾಮ ಸಂಸ್ಥಾಪಕ ಹಾಗೂ ಸೇವಾಭಾರತಿ ಕನ್ಯಾಡಿಯ ಖಜಾಂಚಿ ಕೆ. ವಿನಾಯಕ ರಾವ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೊಟೇರಿ. ಪ್ರೊ.ಟಿ.ಪ್ರಕಾಶ್ ಪ್ರಭು, ಅರಸಿನಮಕ್ಕಿ ಗ್ರಾ.ಪಂ.ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್., ಎಲ್‌ಐಸಿ ಡೆವಲಪ್ ಮೆಂಟ್ ಆಫೀಸರ್ ಉದಯ ಶಂಕರ್, ಸಂಘದ ಉಪಾಧ್ಯಕ್ಷ ರಾಜು ಕೆ., ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಜಿಲ್ಲಾ ಸಂಯೋಜಕ ಪ್ರವೀಣ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಚಂದ್ರ ರಾವ್ ಉಪಸ್ಥಿತರಿದ್ದರು.
ಶಿಬಿರದ ಯಶಸ್ಸಿಗೆ ರೋಟರಿ ಕ್ಲಬ್ ಬೆಳ್ತಂಗಡಿ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಶಿಶಿಲ-ಅರಸಿನಮಕ್ಕಿ, ನವಶಕ್ತಿ ರಿಕ್ಷಾ ಚಾಲಕ ಮಾಲಕರ ಸಂಘ ಅರಸಿನಮಕ್ಕಿ, ಚೈತನ್ಯ ಮಿತ್ರ ಕಲಾವೃಂದ ಅರಸಿನಮಕ್ಕಿ, ಹಾಲು ಉತ್ಪಾದಕರ ಸಹಕಾರಿ ಸಂಘ ಅರಸಿನಮಕ್ಕಿ, ಅಶ್ವಮೇಧ ಫ್ರೆಂಡ್ಸ್ ಅರಸಿನಮಕ್ಕಿ, ಗ್ರಾ.ಪಂ.ಅರಸಿನಮಕ್ಕಿ, ಶ್ರೀ.ಕ್ಷೇ.ಧ. ಗ್ರಾ.ಯೋಜನೆ ಅರಸಿನಮಕ್ಕಿ ವಲಯ, ವನದುರ್ಗಾ ಗೆಳೆಯರ ಬಳಗ ಅರಿಕೆಗುಡ್ಡೆ ಹತ್ಯಡ್ಕ, ಕಾಪು ಉಳ್ಳಾಲ್ತಿ ಗೆಳೆಯರ ಬಳಗ, ಉಪ್ಪರಡ್ಕ, ಸ್ವಸ್ತಿಕ್ ಫ್ರೆಂಡ್ಸ್ ಬೂಡ್ತಮಕ್ಕಿ, ಕಪಿಲ ಕೇಸರಿ ಗೆಳೆಯರ ಬಳಗ ಕುಂಟಾಲಪಳಿಕೆ, ಗ್ರಾ.ಪಂ. ಶಿಶಿಲ, ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲ ವೈಕುಂಠಪುರ ಶಿಶಿಲ, ಹಾಲು ಉತ್ಪಾದಕರ ಸಹಕಾರಿ ಸಂಘ ಶಿಶಿಲ, ಹಿಂದೂ ಜಾಗರಣಾ ವೇದಿಕೆ ಶಿಶಿಲ, ಬ್ರಹ್ಮಶ್ರೀ ಫ್ರೆಂಡ್ಸ್ ಓಟ್ಲ ಶಿಶಿಲ, ದೇನೋಡಿ ಗೆಳೆಯರ ಬಳಗ ಶಿಶಿಲ, ಆಟೋ ಚಾಲಕ ಮಾಲಕರ ಸಂಘ ಶಿಶಿಲ, ಜೈ ಶ್ರೀರಾಮ್ ಗೆಳೆಯರ ಬಳಗ ಶಿಬಾಜೆ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಪೆರ್ಲ, ವಿಶ್ವ ಹಿಂದೂ ಪರಿಷತ್ ಭಜರಂಗದಳ ರೆಖ್ಯ, ಹಾಲು ಉತ್ಪಾದಕರ ಸಹಕಾರಿ ಸಂಘ ರೆಖ್ಯ ಗ್ರಾ.ಪಂ.ಶಿಬಾಜೆ ಸಹಕರಿಸಿದರು.
ಈ ಶಿಬಿರದಲ್ಲಿ ಒಟ್ಟು 53 ಯೂನಿಟ್‌ಗಳ ರಕ್ತ ಸಂಗ್ರಹ ಮಾಡಲಾಯಿತು.ಬೇಬಿ ಕಿರಣ್ ಸ್ವಾಗತಿಸಿದರು, ವರದ ಶಂಕರ್ ಕಾರ್ಯಕ್ರಮ ನಿರೂಪಿಸಿದರು. ರತೀಶ್ ಬಿ ವಂದಿಸಿದರು.






