ಉಜಿರೆ ಎಸ್.ಡಿ.ಎಂ. ಪಿಯು ಕಾಲೇಜು ವಾಣಿಜ್ಯ ವಿದ್ಯಾರ್ಥಿಗಳ ಕೈಗಾರಿಕಾ ಭೇಟಿ

ಶೇರ್ ಮಾಡಿ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕೈಗಾರಿಕಾ ಭೇಟಿ ಅಭಿಯಾನದಡಿಯಲ್ಲಿ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಹಾಗೂ ಉಜಿರೆಯ ಮಂಜುಶ್ರೀ ಪ್ರಿಂಟ್ಸ್‌ಗೆ ಶೈಕ್ಷಣಿಕ ಭೇಟಿ ನೀಡಿದರು.

ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮ್ಯಾನೇಜರ್ ಜೀವನ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಸಂಸ್ಥೆಯ ಉದ್ದೇಶ, ಕಾರ್ಯವೈಖರಿ, ಉತ್ಪನ್ನಗಳ ತಯಾರಿಕೆಯ ಹಂತಗಳು, ಉದ್ಯೋಗಿಗಳಿಗೆ ದೊರೆಯುವ ಸೌಲಭ್ಯಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ನೇರವಾಗಿ ತಯಾರಿಕಾ ಘಟಕಗಳನ್ನು ವೀಕ್ಷಿಸಿ ಅನುಭವ ಹಂಚಿಕೊಂಡರು.

ಅದೇ ರೀತಿ, ಮಂಜುಶ್ರೀ ಪ್ರಿಂಟ್ಸ್‌ನಲ್ಲಿ ಮ್ಯಾನೇಜರ್ ತಂತ್ರಜ್ಞಾನ ಬಳಕೆ, ಮುದ್ರಣ ಪ್ರಕ್ರಿಯೆ, ಉತ್ಪಾದನಾ ಕ್ರಮಗಳ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನ ಪಡೆದು ಕುತೂಹಲದ ಪ್ರಶ್ನೆಗಳನ್ನು ಕೇಳಿದರು.

ಕಾಲೇಜು ಪ್ರಾಂಶುಪಾಲ ಪ್ರೊ. ಪ್ರಮೋದ್ ಕುಮಾರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಇಂತಹ ಕೈಗಾರಿಕಾ ಭೇಟಿಗಳು ವಾಣಿಜ್ಯ ಜ್ಞಾನಕ್ಕೆ ಪೂರಕವಾಗುತ್ತವೆ ಎಂದು ತಿಳಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕರು ಹಾಗೂ ಇತರೆ ವಿಭಾಗದ ಅಧ್ಯಾಪಕರು ಕಾರ್ಯಕ್ರಮ ಯಶಸ್ವಿಗೆ ಸಹಕಾರ ನೀಡಿದರು.

  •  

Leave a Reply

error: Content is protected !!