

ನೆಲ್ಯಾಡಿ: ಕಡಬ ತಾಲೂಕಿನ ಶಿರಾಡಿ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಅಮ್ಮಾಜೆಯಲ್ಲಿ ಸಂಭ್ರಮಭರಿತ ನವರಾತ್ರಿ ಪೂಜಾ ಮಹೋತ್ಸವವು ಸೆ.22 ರಿಂದ ಧಾರ್ಮಿಕ ವೈಭವದೊಂದಿಗೆ ಆರಂಭಗೊಂಡಿದೆ.
ನವರಾತ್ರಿಯ ಅವಧಿಯಲ್ಲಿ ಪ್ರತಿದಿನವೂ ಭಜನಾ ತಂಡಗಳಿಂದ ಭಜನಾ ಸೇವೆ ಹಾಗೂ ಭರತನಾಟ್ಯ ಕಲಾತಂಡಗಳಿಂದ ಭರತನಾಟ್ಯ ಸೇವೆಗಳು ನಡೆಯುತ್ತಿದ್ದು, ಭಕ್ತರ ಮನಸ್ಸಿಗೆ ಆಧ್ಯಾತ್ಮಿಕ ಉಲ್ಲಾಸವನ್ನು ನೀಡುತ್ತಿವೆ.
ಅ.1ರ ವರೆಗೆ ವಿಶೇಷ ರಂಗಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿದೆ.






