

ಗೋಳಿತೊಟ್ಟು: ಗ್ರಾಮದ ಸಣ್ಣಂಪಾಡಿ ನಿವಾಸಿ ಹಾಗೂ ಆಟೋ ಚಾಲಕರಾಗಿದ್ದ ಪ್ರಿನ್ಸ್ ಮೆಕುಹಿಕಟ್ಟ್(38) ಅವರು ಕಿಡ್ನಿ ವೈಫಲ್ಯದಿಂದ ಶುಕ್ರವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ನಿಧನರಾದರು.
ಅವರು ಸುಮಾರು 15 ವರ್ಷಗಳಿಂದ ಗೋಳಿತೊಟ್ಟಿನಲ್ಲಿ ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಸಹೋದರರನ್ನು ಕಳೆದುಕೊಂಡಿದ್ದರೆ, ಒಂದು ವರ್ಷದ ಹಿಂದೆ ತಾಯಿ ಅನಾರೋಗ್ಯದಿಂದ ನಿಧನರಾಗಿದ್ದರು.
ಪ್ರಿನ್ಸ್ ಅವರು ತಂದೆಯೊಂದಿಗೆ ವಾಸವಾಗಿದ್ದರು.






