ಗೋಳಿತ್ತೊಟ್ಟು ಗ್ರಾ.ಪಂ.ಪ್ರಭಾರ ಪಿಡಿಒ ಆಗಿ ಚಂದ್ರಾವತಿ ಎನ್.

ಶೇರ್ ಮಾಡಿ

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾ.ಪಂ. ಪ್ರಭಾರ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಸದ್ರಿ ಗ್ರಾ.ಪಂ.ನಲ್ಲಿ ಕಾರ್ಯದರ್ಶಿಯಾಗಿರುವ ಚಂದ್ರಾವತಿ ಎನ್.ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಗೋಳಿತ್ತೊಟ್ಟು ಗ್ರಾ.ಪಂ.ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಜಗದೀಶ ನಾಯ್ಕ್‍ ಅವರಿಗೆ ಮುಂಡೂರು ಗ್ರಾ.ಪಂ.ಗೆ ವರ್ಗಾವಣೆಯಾಗಿದ್ದು ಈ ಹಿನ್ನೆಲೆಯಲ್ಲಿ ಹಾಲಿ ಕಾರ್ಯದರ್ಶಿ ಚಂದ್ರಾವತಿ ಎನ್., ಅವರಿಗೆ ಪ್ರಭಾರ ಪಿಡಿಒ ಜವಾಬ್ದಾರಿ ನೀಡಲಾಗಿದೆ. ನೆಲ್ಯಾಡಿ ನಿವಾಸಿಯಾಗಿರುವ ಚಂದ್ರಾವತಿ ಎನ್.ಅವರು ಈ ಹಿಂದೆ 34 ನೆಕ್ಕಿಲಾಡಿ, ಕೌಕ್ರಾಡಿ, ಶಿರಾಡಿ, ಗೋಳಿತ್ತೊಟ್ಟು ಗ್ರಾ.ಪಂ.ಗಳಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

  •  

Leave a Reply

error: Content is protected !!