ಕಡಬ: ಪ್ರಾಮ್ಟ್ ಟೆಕ್ನೋ ಸೊಲ್ಯೂಷನ್ಸ್ ಶುಭಾರಂಭ

ಶೇರ್ ಮಾಡಿ

ನೇಸರ ಮಾ.14: ಕಡಬ ಮುಖ್ಯ ರಸ್ತೆಯಲ್ಲಿರುವ ಶ್ರೀ ರಾಮ್ ಟವರ್ಸ್‍ನ ಮೊದಲನೆ ಮಹಡಿಯಲ್ಲಿ ಕಂಪ್ಯೂಟರ್ ಮಾರಾಟ ಮತ್ತು ಸೇವಾ ಮಳಿಗೆ ಪ್ರಾಮ್ಟ್ ಟೆಕ್ನೋ ಸೊಲ್ಯೂಷನ್ಸ್ ಮಾ.14ರಂದು ಶುಭಾರಂಭಗೊಂಡಿತು. ಜೋಸೆಫ್ ಎ.ಜೆ. ಮತ್ತು ಆನೀಶ್ ದಂಪತಿಗಳು ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ನೆಲ್ಯಾಡಿ ಆಲ್ಪೋನ್ಸಾ ಚರ್ಚ್‌ನ ಸಹಾಯಕ ಧರ್ಮಗುರು ಫಾ.ವರ್ಗೀಸ್ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀ ರಾಮ್ ಟವರ್ಸ್‍ನ ಮಾಲಕರಾದ ಶಿವರಾಮ ಶೆಟ್ಟಿ ಕೇಪು, ಮುತ್ತೊಟ್ಟು ಫಿನ್ ಕಾರ್ಪ್‌ನ ಏರಿಯಾ ಮ್ಯಾನೆಜರ್ ಜಾರ್ಜ್ ಕುಟ್ಟಿ, ಕೊಕ್ಕಡ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ, ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಪವನ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, ನಮ್ಮಲ್ಲಿ ಸಿಸಿಟಿವಿ ಅಳವಡಿಕೆ ಮತ್ತು ರಿಪೇರಿ, ಪ್ರಿಂಟರ್‌ಗಳ ಮಾರಾಟ ಮತ್ತು ರಿಪೇರಿ, ಎಲ್ಲಾ ಮಾದರಿಯ ಪ್ರಿಂಟರ್‌ಗಳ ಇಂಕ್ ಹಾಗೂ ಟೋನರ್ ರೀಪಿಲ್ಲಿಂಗ್, ಸೆಕ್ಯುರಿಟಿ ಸಿಸ್ಟಮ್ ಅಳವಡಿಕೆ ಮತ್ತು ರಿಪೇರಿ, ಫಯರ್ ಅಲಾರ್ಮ್, ಫಯರ್ ಪೈಟಿಂಗ್ ಸಿಸ್ಟಮ್ ಅಳವಡಿಕೆ ಮತ್ತು ರಿಪೇರಿ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದರು.

ವೀಕ್ಷಿಸಿ Subscribers ಮಾಡಿ

—ಜಾಹೀರಾತು—

Leave a Reply

error: Content is protected !!