ರಾಷ್ಟ್ರಮಟ್ಟಕ್ಕೆ ಮುಂಡಾಜೆ ವಿದ್ಯಾರ್ಥಿನಿ ಯಕ್ಷಿತಾ ಜೆ

ಶೇರ್ ಮಾಡಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಯಕ್ಷಿತಾ ಜೆ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿ ತಾಲೂಕು ಹಾಗೂ ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ್ದಾರೆ.

ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ 17 ವರ್ಷ ವಯೋಮಾನದ ವಿದ್ಯಾರ್ಥಿನಿಯರ ರಾಜ್ಯ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ಯಕ್ಷಿತಾ ಜೆ, ತನ್ನ ಅದ್ಭುತ ಆಟದ ಮೂಲಕ ತಂಡಕ್ಕೆ ಚಿನ್ನದ ಪದಕ ತಂದುಕೊಟ್ಟು ಕೀರ್ತಿ ತಂದಿದ್ದಾರೆ.

ಈ ಸಾಧನೆಯ ಹಿನ್ನೆಲೆಯಲ್ಲಿ, ಯಕ್ಷಿತಾ ನವೆಂಬರ್ 7 ರಿಂದ 12ರವರೆಗೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆಯುವ 70ನೇ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾದ ಗೌರವ ಪಡೆದಿದ್ದಾಳೆ.

ಯಕ್ಷಿತಾ ಬಂದಾರಿನ ಜನಾರ್ಧನ-ಶೀಲಾವತಿ ದಂಪತಿಗಳ ಸುಪುತ್ರಿ ಆಗಿದ್ದು, ಬಂದಾರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿದ್ದಾಳೆ. ಇವಳಿಗೆ ದೈಹಿಕಶಿಕ್ಷಣ ಶಿಕ್ಷಕರಾದ ಗುಣಪಾಲ್ ಎಂ.ಎಸ್ ಹಾಗೂ ಸಂದೀಪ್ ಶೆಟ್ಟಿ ತರಬೇತಿ ನೀಡಿದ್ದರು.

ಯಕ್ಷಿತಾ ಸಾಧನೆಗೆ ಮುಂಡಾಜೆ ಪ್ರೌಢಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿ, ಮುಂದಿನ ರಾಷ್ಟ್ರಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

  •  

Leave a Reply

error: Content is protected !!