ಅರಸಿನಮಕ್ಕಿ – ಶಿಶಿಲ ಶೌರ್ಯ ವಿಪತ್ತು ಘಟಕದ ಶ್ರಮದಾನ

ಶೇರ್ ಮಾಡಿ

ಕೊಕ್ಕಡ: ಸಾಮಾಜಿಕ ಹೊಣೆಗಾರಿಕೆಯಿಂದಾಗಿ ಸಮಾಜದ ಬಡವರ ಕಷ್ಟಗಳತ್ತ ಶಿಶಿಲ–ಅರಸಿನಮಕ್ಕಿ ಶೌರ್ಯ ವಿಪತ್ತು ಘಟಕದ ಸದಸ್ಯರು ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.

ಶಿವಾಜಿ ಗ್ರಾಮದ ಬಂಡಿಹೊಳೆ ಎಂಬಲ್ಲಿ ಅನಾರೋಗ್ಯದಿಂದ ಬಳಲುತ್ತಾ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಹಾಗೂ ಕಡುಬಡತನದಲ್ಲಿರುವ ವಯೋವೃದ್ಧರ ಮನೆಗೆ ಹೋಗಲು ಸರಿಯಾದ ಸಂಪರ್ಕ ಮಾರ್ಗವೇ ಇಲ್ಲದಿರುವುದನ್ನು ಗಮನಿಸಿದ ಶೌರ್ಯ ಘಟಕದ ಸದಸ್ಯರು ಒಟ್ಟಾಗಿ ಶ್ರಮದಾನದ ಮೂಲಕ ರಸ್ತೆಯ ಹಾದಿಯನ್ನು ಸರಿಪಡಿಸಿ ವಾಹನ ಓಡಾಡುವಂತೆಯೂ ಮಾಡಿದ್ದಾರೆ.

ಇದಲ್ಲದೆ ಸಾರ್ವಜನಿಕ ಹಿತದ ದೃಷ್ಟಿಯಿಂದ ಶಿಶಿಲ–ಅರಸಿನಮಕ್ಕಿ ಮುಖ್ಯರಸ್ತೆಯ ಬರ್ಗುಳ ಎಂಬಲ್ಲಿ ಹದಗೆಟ್ಟಿದ್ದ ರಸ್ತೆ ಭಾಗದಲ್ಲೂ ಶ್ರಮದಾನ ನಡೆಸಿ ಹೊಂಡಗಳನ್ನು ಮುಚ್ಚುವ, ನೀರಿನ ಹರಿವಿಗೆ ವ್ಯವಸ್ಥೆ ಕಲ್ಪಿಸುವ, ರಸ್ತೆ ಬದಿಯ ಗಿಡಗಂಟೆಗಳನ್ನು ತೆಗೆಯುವ ಮೂಲಕ ಸಂಚಾರಕ್ಕೆ ಅನುಕೂಲವಾಗುವಂತೆ ಮಾರ್ಗ ಸುಧಾರಣೆ ಮಾಡಿದ್ದಾರೆ.

ಘಟಕದ ಸೋಮಶೇಖರ ಪೆರ್ಲ, ಶೀನಪ್ಪ ನಾಯ್ಕ್, ಉಮೇಶ್ ದೇನೋಡಿ, ರಾಧಾಕೃಷ್ಣ ಗುತ್ತು, ಅವಿನಾಶ್ ಭಿಡೆ ಹಾಗೂ ರಮೇಶ ಬೈರಕಟ್ಟ ಅವರು ಶ್ರಮದಾನದಲ್ಲಿ ಭಾಗವಹಿಸಿದ್ದರು.

  •  

Leave a Reply

error: Content is protected !!