

ಪಾಣೆಮಂಗಳೂರು: ಅ.29ರಂದು ಪಾಣೆಮಂಗಳೂರು ಹಳೆ ಸೇತುವೆಯ ಬಳಿ ತನ್ನ ಇಲೆಕ್ಟ್ರಿಕ್ ಆಟೋ ರಿಕ್ಷಾವನ್ನು ನಿಲ್ಲಿಸಿ ನಾಪತ್ತೆಯಾಗಿದ್ದ ಮಾರ್ನಬೈಲು ನಿವಾಸಿ ಆಟೋ ಚಾಲಕ ಪ್ರೀತಂ ಲೋಬೋ ಅವರ ಶವ ಇಂದು ನೇತ್ರಾವತಿ ನದಿಯ ಡ್ಯಾಂ ಸಮೀಪ ಮರವೊಂದರಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳೀಯರು ಮತ್ತು ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತದೇಹವನ್ನು ನದಿತೀರಕ್ಕೆ ತಂದು ಇಟ್ಟಿದ್ದಾರೆ. ಮೃತದೇಹವನ್ನು ಶವಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸುವ ಕಾರ್ಯ ನಡೆಯುತ್ತಿದೆ.






