ಪಟ್ರಮೆ ಬಿಜೆಪಿ ಶಕ್ತಿ ಕೇಂದ್ರದಲ್ಲಿ ಅಭ್ಯಾಸ ವರ್ಗ

ಶೇರ್ ಮಾಡಿ

ಕೊಕ್ಕಡ: ಬಿಜೆಪಿ ಪಟ್ರಮೆ ಶಕ್ತಿ ಕೇಂದ್ರದ ವತಿಯಿಂದ ಅಭ್ಯಾಸ ವರ್ಗ ಕಾರ್ಯಕ್ರಮ ನ.04 ರಂದು ನಡೆಯಿತು. ಬಿಜೆಪಿ ಹಿರಿಯ ಕಾರ್ಯಕರ್ತರಾದ ಧರ್ಮಪಾಲ ಅಜ್ರಿ ಹಾಗೂ ಜಿನ್ನಪ್ಪ ಗೌಡ ದೀಪ ಬೆಳಗಿಸಿ, ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಿಜೆಪಿ ಮಂಡಲ ಉಪಾಧ್ಯಕ್ಷ ಕೊರಗಪ್ಪ ಗೌಡ ಉದ್ಘಾಟನಾ ಭಾಷಣ ಮಾಡಿ ಸಂಘಟನೆಯ ಶಕ್ತಿ ಹಾಗೂ ಕಾರ್ಯಕರ್ತರ ಪಾತ್ರದ ಮಹತ್ವವನ್ನು ವಿವರಿಸಿದರು. ಈ ಸಂದರ್ಭದಲ್ಲಿ “ನಮ್ಮ ವೈಚಾರಿಕತೆ ಮತ್ತು ಪಂಚ ಪರಿವರ್ತನೆ” ವಿಷಯವನ್ನು ಸೀತಾರಾಮ್ ಬೆಳಾಲು ಮಂಡಿಸಿದರು. “ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದೊಂದಿಗೆ ನಮ್ಮ ಪಾತ್ರ” ವಿಷಯದ ಕುರಿತು ಮಹಾಬಲ ಗೌಡ ನಾಗಂದೋಡಿ ಮಾಹಿತಿ ನೀಡಿದರು. “ವಿಕಸಿತ ಭಾರತದ ಅಮೃತಕಾಲದಲ್ಲಿ ನಮ್ಮ ಸಕ್ರಿಯತೆ” ವಿಷಯವನ್ನು ವೃಷಾಂಕ್ ಖಾಡಿಲ್ಕರ್ ಅರಸಿನಮಕ್ಕಿ ಮಂಡಿಸಿದರು.

ಧರ್ಮಸ್ಥಳ ಮಹಾಶಕ್ತಿಕೇಂದ್ರ ಅಧ್ಯಕ್ಷ ಹರೀಶ್ ಕೆ.ಬಿ. ಅವರ ನೇತೃತ್ವದಲ್ಲಿ ಬೂತ್ ಷಾ ಬೈಠಕ್ ನಡೆಯಿತು ಹಾಗೂ ವಿವಿಧ ಬೂತ್ ಘಟಕಗಳಿಂದ ವರದಿ ಪಡೆದುಕೊಳ್ಳಲಾಯಿತು.

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ ಭಾಗವಹಿಸಿ ಸಮಾರೋಪ ಭಾಷಣ ಮಾಡಿ ಕಾರ್ಯಕರ್ತರಿಗೆ ಸಂಘಟನೆ ಬಲಪಡಿಸುವ ಮತ್ತು ಮತದಾರರೊಂದಿಗೆ ನೇರ ಸಂಪರ್ಕ ಬೆಳೆಸುವ ಅಗತ್ಯತೆಯನ್ನು ಒತ್ತಿಹೇಳಿದರು. ವೇದಿಕೆಯಲ್ಲಿ ಮಂಡಲ ಉಪಾಧ್ಯಕ್ಷ ಚನ್ನಕೇಶವ, ಶಕ್ತಿಕೇಂದ್ರ ಪ್ರಭಾರಿ ಸಂದೀಪ್ ರೈ ಧರ್ಮಸ್ಥಳ, ಶಕ್ತಿಕೇಂದ್ರ ಪ್ರಮುಖ ಹಾಗೂ ಪಂಚಾಯತ್ ಅಧ್ಯಕ್ಷ ಮನೋಜ್ ಗೌಡ ಉಪಸ್ಥಿತರಿದ್ದರು.

ಉದಯ ಕುಮಾರ್ ಸ್ವಾಗತಿಸಿದರು, ಮನೋಜ್ ಗೌಡ ವಂದಿಸಿದರು. ಬಿಜೆಪಿ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಶಾಂತಿ ಮಂತ್ರದೊಂದಿಗೆ ಸಮಾರೋಪಗೊಂಡಿತು.

  •  

Leave a Reply

error: Content is protected !!