ಜೇಸಿಐ ಸುಳ್ಯ ಸಿಟಿ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಶೇರ್ ಮಾಡಿ

ನೇಸರ ಮಾ.15: ಜೇಸಿಐ ಸುಳ್ಯ ಸಿಟಿ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ 14/03/2022 ಸೋಮವಾರದಂದು ಸುಳ್ಯದ ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಯಿತು.
ಘಟಕದ ಉಪದ್ಯಕ್ಷರಾದ ಅಶ್ವಥ್ ಅಡ್ಕಾರ್ ಸಭಾದ್ಯಕ್ಷತೆಯನ್ನು ವಹಿಸಿದ್ದರು. 2021 ರಲ್ಲಿ ಜೇಸಿಐ ಭಾರತ ನಡೆಸಿದ ತರಭೇತುದಾರರ ಕಮ್ಮಟದಲ್ಲಿ ಭಾಗವಹಿಸಿ ವಲಯ ತರಭೇತುದಾರರಾಗಿ ತೇರ್ಗಡೆ ಹೊಂದಿರುವ ಹಾಗೂ ಮೋದಿ ಕೇರ್ ಸಂಸ್ಥೆಯ ಉದ್ಯಮದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಅತ್ಯುನ್ನತ ಸಾಧನೆಗಾಗಿ ಸಂಸ್ಥೆಯ ವತಿಯಿಂದ ‘ಕಾರ್ ಅಚೀವರ್’ ಗೌರವ ಮನ್ನಣೆ ಪಡೆದಿರುವ ಜೇಸಿಐ ಮಂಗಳೂರು ಸಾಮ್ರಾಟ್ ಘಟಕದ ಸದಸ್ಯೆ ಜೇಸಿ.ದೀಪಾ ರಾವ್ ಅವರನ್ನು ವಿಶ್ವ ಮಹಿಳಾ ದಿನದ ಅಂಗವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.

ವೀಕ್ಷಿಸಿ Subscribers ಮಾಡಿ

ವಲಯಾಧಿಕಾರಿಗಳಾದ ಜೇಸಿ.ಮನಮೋಹನ ಬಳ್ಳಡ್ಕ, ಜೇಸಿ ತೀರ್ಥವರ್ಣ ಬಳ್ಳಡ್ಕ, ಪೂರ್ವಾದ್ಯಕ್ಷರಾದ ವಿನಾಯರಾಜ್ ಮಡ್ತಿಲ, ನಿಕಟಪೂರ್ವ ಅದ್ಯಕ್ಷರಾದ ಚಂದ್ರಶೇಖರ ಕನಕಮಜಲು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಘಟಕದ ಸದಸ್ಯರಾದ ಜೇಸಿ ಶ್ರುತಿ, ಜೇಸಿ ಸಾಯಿಶ್ರುತಿ, ಜೇಸಿ ಲೋಹಿತ್, ಜೇಸಿ ಮದನ್, ಜೇಸಿ ಶಾಪಿ ಕಲ್ಲೇರಿ, ಜೇಸಿ ರಂಜಿತ್, ಜೇಸಿ ಗೋಪಾಲಕೃಷ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಜೇಸಿ ಶಶಿಧರ ಎಕ್ಕಡ್ಕ ವಂದಿಸಿದರು.

Leave a Reply

error: Content is protected !!