

ನೆಲ್ಯಾಡಿ: ಉದ್ಯಮಿ ಹಾಗೂ ಕಂಬಳ ಸಂಘಟಕ ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ್ ಆಳ್ವ (29) ಅವರ ಮೃತದೇಹ ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಶಾಂಭವಿ ನದಿ ತೀರದಲ್ಲಿ ಶುಕ್ರವಾರ (ನ.07) ಮುಂಜಾನೆ ಪತ್ತೆಯಾಗಿದೆ.
ಕಂಬಳ ಪ್ರೇಮಿಯಾಗಿದ್ದ ಅಭಿಷೇಕ್ ಆಳ್ವ ಅವರು ಕಳೆದ 5 ವರ್ಷಗಳಿಂದ ನೆಲ್ಯಾಡಿಯ ಚರಣ್ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ನಡೆಸುತ್ತಿದ್ದರು. ಈ ಬಾರ್ ಅನ್ನು ಅವರ ತಂದೆ ನವೀನ್ ಚಂದ್ರ ಆಳ್ವ ಲೀಜ್‌ಗೆ ಪಡೆದುಕೊಂಡಿದ್ದು, ನಿರ್ವಹಣೆಯನ್ನು ಅಭಿಷೇಕ್ ವಹಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ಅಭಿಷೇಕ್ ಆಳ್ವ ನಾಪತ್ತೆಯಾಗಿರುವ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶುಕ್ರವಾರ ಬೆಳಿಗ್ಗೆ ಶಾಂಭವಿ ನದಿ ತೀರದಲ್ಲಿ ಪತ್ತೆಯಾದ ಶವದ ಗುರುತಿನ ಆಧಾರದ ಮೇಲೆ ಅಭಿಷೇಕ್ ಆಳ್ವ ಎಂದು ಖಚಿತಪಡಿಸಲಾಗಿದೆ.
ಘಟನೆಯ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .






